ಸಂಕೇಶ್ವರ ಪಟ್ಟಣದ ಶ್ರೀ ದುರದುಂಡೀಶ್ವರ ಹೋಲ್‌ಸೇಲ್ ಕಾಯಿಪಲ್ಲೆ ಮಾರುಕಟ್ಟೆಯನ್ನು ರೈತರು ಹಾಗೂ ಕಾಯಿಪಲ್ಲೆ ಮಾರಾಟಗಾರರು ಬಂದ್ ಮಾಡಿ ಪ್ರತಿಭಟಿಸಿದರು.  
ಜಿಲ್ಲೆ

ಮಾರುಕಟ್ಟೆ ಬಂದ್ ಮಾಡಿ ಆಕ್ರೋಶ

ಪ್ರಶಾಂತ ಹೂಗಾರ

ಸಂಕೇಶ್ವರ: ಪಟ್ಟಣದ ಹೋಲ್‌ಸೇಲ್ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಸಮಿತಿಯವರು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಮತ್ತು ರೈತರೊಂದಿಗೆ ದುರ್ವರ್ತನೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಯಿಪಲ್ಲೆ ಬೆಳೆಗಾರರು ಹಾಗೂ ಮಾರಾಟಗಾರರು ಮಂಗಳವಾರ ಕೆಲಕಾಲ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳಿಂದ ಸಂಕೇಶ್ವರ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ, ಯಮಕನಮರಡಿ ಭಾಗದ ರೈತರ ತರಕಾರಿಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತಿರುವ ಕಾಯಿಪಲ್ಲೆ ಮಾರುಕಟ್ಟೆ ಇತ್ತೀಚಿಗೆ ರೈತರಿಂದ ಹಾಗೂ ಬೀದಿ ವ್ಯಾಪಾರಸ್ಥರಿಂದ ಹೆಚ್ಚಾಗಿ ಹಣ ಸಂಗ್ರಹಿಸುತ್ತಿದೆ.

ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದೆ. ಕಾಯಿಪಲ್ಲೆ ಮಾರುಕಟ್ಟೆ ದುರ್ವರ್ತನೆ ಮೀತಿ ಮೀರಿದೆ. ಇತ್ತೀಚಿನ ದಿನಗಳಲ್ಲಿ ತುಂಬ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ರೈತರಿಗೆ ಮಾರುಕಟ್ಟೆ ಸಹಕಾರಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿದರು.