ಜಿಲ್ಲೆ

ಮಾರ್ಕಂಡೇಶ್ವರ ಪಲ್ಲಕ್ಕಿ ಮೆರವಣಿಗೆ

ಮಸ್ಕಿ: ಪಟ್ಟಣದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಸೋಮವಾರ ನೂಲು ಹುಣ್ಣಿಮೆ ಹಿನ್ನೆಲೆಯಲ್ಲಿ ಪದ್ಮಶಾಲಿ (ನೇಕಾರ) ಸಮಾಜದಿಂದ ಸಾಮೂಹಿಕ ಜನಿವಾರ ಧಾರಣೆ ಕಾರ್ಯಕ್ರಮ ನಡೆಯಿತು.

ಮಹಿಳೆಯರ ಕಳಸ-ಕನ್ನಡಿಯೊಂದಿಗೆ 53 ನೇ ವರ್ಷದ ಮಾರ್ಕಂಡೇಶ್ವರ ಪಲ್ಲಕ್ಕಿ ಸೇವಾ ಕಾರ್ಯದ ಮೆರವಣಿಗೆ ದೇವಸ್ಥಾನದಿಂದ ಆರಂಭವಾಗಿ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ನಡೆಯಿತು. ದೇವಸ್ಥಾನದಲ್ಲಿ ಬೋರ್‌ವೆಲ್ ಕೊರೆಯಿಸಿದ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಬ್ಯಾಳಿ ಹಾಗೂ ಗೀತಾ ಶಿವರಾಜ ಅವರನ್ನು ಸತ್ಕರಿಸಲಾಯಿತು.

ಪ್ರಮುಖರಾದ ಪರಶುರಾಮ ಕೊಡಗುಂಟಿ, ವೆಂಕಟೇಶ ಪಗಡೆಕಲ್, ಈರಪ್ಪ ಆಂದಲಿ, ವೀರೇಶ ಪೂಜಾರ, ರಾಘವೇಂದ್ರ ಚಿನ್ನಿ, ಮಲ್ಲಿಕಾರ್ಜುನ ಶ್ಯಾಸಲ್, ನಾಗರಾಜ ಕರ್ಲಿ ,ಮುನಿಯಪ್ಪ ಕರ್ಲಿ, ಪರಶುರಾಮ ದೇವರಡ್ಡಿ ಇತರರಿದ್ದರು.