ಶೃಂಗೇರಿ: ಮರ್ಕಲ್ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಮರ್ಕಲ್ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ತಾಪಂ ಕಚೇರಿ ಎದುರು ಧರಣಿ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಇಒ ಸುದೀಪ್ ಮಾತನಾಡಿ, ಮರ್ಕಲ್ ಗ್ರಾಪಂ ಪಿಡಿಒ ಅವರನ್ನು ಅಮಾನತು ಮಾಡುವಂತೆ ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಇಒ ಕೀರ್ತನಾ ಅವರಿಗೆ ಮನವಿ ಮಾಡಿ ವರದಿ ಸಲ್ಲಿಸಲಾಗಿದೆ ಎಂದರು.
ಮಂಗಳವಾರ 11 ಗಂಟೆಗೆ ಪರಿಶೀಲನೆ ಮಾಡಿ ಪಿಡಿಒ ಹಾಗೂ ಹಾಲಿ ಅಧ್ಯಕ್ಷರ ಕಾರ್ಯ ವೈಖ್ಯರಿ ಕುರಿತು ಇಲಾಖಾ ತನಿಖೆ ನಡೆಸುವುದಾಗಿ ಸಿಇಒ ಅವರು ಭರವಸೆ ನೀಡಿ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಗ್ರಾಪಂ ಸದಸ್ಯರಾದ ಪ್ರಶಾಂತ್, ನಟೇಶ್, ಶಿವಶಂಕರ್, ಸುರೇಖಾ ಕೃಷ್ಣಮೂರ್ತಿ, ಪ್ರಿಯಾ, ಸುರಭಿ ಭಾಗವಹಿಸಿದ್ದರು.