ಬ್ಯಾಲಕುಂದಿ ಗ್ರಾಮದ ಉಡಸಲಮ್ಮ ದೇವಿ ದೇವಸ್ಥಾನದ ಬಾಗಿಲು ಮುರಿದಿರುವ ಕಳ್ಳರು. 
ಜಿಲ್ಲೆ

ಮರಿಯಮ್ಮನಹಳ್ಳಿ ಸಮೀಪದ ಉಡಸಲಮ್ಮ ದೇವಸ್ಥಾನದಲ್ಲಿ ಕಳ್ಳತನ: ಹುಂಡಿ, ಬೆಳ್ಳಿ ಆಭರಣ, ಘಂಟೆ ಕಳವು

ಮರಿಯಮ್ಮನಹಳ್ಳಿ: ಸಮೀಪದ ಬ್ಯಾಲಕುಂದಿ ಗ್ರಾಮದ ಶ್ರೀ ಉಡಸಲಮ್ಮ ದೇವಿ ದೇವಸ್ಥಾನ ಬಾಗಿಲಿನ ಬೀಗ ಮುರಿದು ಕಾಣಿಕೆ ಪೆಟ್ಟಿಗೆ, ಬೆಳ್ಳಿ ಆಭರಣಗಳು ಹಾಗೂ ದೊಡ್ಡ ತಾಮ್ರದ ಘಂಟೆಯನ್ನು ಕಳ್ಳರು ಬುಧವಾರ ರಾತ್ರಿ ದೋಚಿ ಪರಾರಿಯಾಗಿದ್ದಾರೆ. ಐತಿಹಾಸಿಕ ಉಡಸಲಮ್ಮ ದೇವಸ್ಥಾನ ಗ್ರಾಮದ ಹೊರ ವಲಯದಲ್ಲಿದ್ದು, ಸುತ್ತಲಿನ ನಾಲ್ಕೈದು ಗ್ರಾಮಸ್ಥರು ನಡೆದುಕೊಳ್ಳುತ್ತಾರೆ. ಮಂಗಳವಾರ ದೇವಸ್ಥಾನ ಪೂಜಾರಿ ಮಲ್ಲೇಶ್, ಪೂಜೆ ಕೈಂಕರ್ಯ ಮುಗಿಸಿ ಊರಿಗೆ ತೆರಳಿದ್ದಾರೆ. ಅವರು ಊರಲ್ಲಿ ಇಲ್ಲದ್ದನ್ನು ಗಮನಿಸಿದ ಖದೀಮರು ದೇವಸ್ಥಾನದ ಬೀಗ ಮುರಿದು ಕಾಣಿಕೆ ಪೆಟ್ಟಿಗೆ, ಬೆಳ್ಳಿ ಆಭರಣಗಳು ಹಾಗೂ ದೇವಸ್ಥಾನದ ಹೊರ ಭಾಗದಲ್ಲಿ ಹಾಕಿದ್ದ ದೊಡ್ಡದಾದ ತಾಮ್ರದ ಘಂಟೆಯನ್ನು ಕದ್ದೊಯ್ದಿದ್ದಾರೆ.