ಜಿಲ್ಲೆ

ಸ್ಮಶಾನಕ್ಕೆ ದಾರಿ ಇಲ್ಲದೇ ಹೆಣ ಹೂಳಲು ಪರದಾಟ

ಮಂಜುನಾಥ

ಮರಿಯಮ್ಮನಹಳ್ಳಿ: ನೂರಾರು ವರ್ಷಗಳಿಂದ ಇರುವ ಸ್ಮಶಾನಕ್ಕೆ ದಾರಿ ಬಿಡದೇ ಖಾಸಗಿ ವ್ಯಕ್ತಿ ತಂತಿ ಬೇಲಿ ಹಾಕಿದ ಘಟನೆ ಸಮೀಪದ ಹಂಪಿನಕಟ್ಟೆ ಗ್ರಾಮದ ಬಳಿ ಶನಿವಾರ ಘಟನೆ ನಡೆದಿದೆ.

ಮುಸ್ಲಿಂ ಸಮುದಾಯದಲ್ಲೋಬ್ಬರು ಭಾನುವಾರ ಮೃತರಾಗಿದ್ದರು. ಅಂತ್ಯ ಸಂಸ್ಕಾರಕ್ಕೆ ಹೋಗುವ ವೇಳೆ ರಸ್ತೆಗೆ ತಂತಿ ಬೇಲಿ ಹಾಕಲಾಗಿತ್ತು. ದಾರಿ ಇಲ್ಲದೇ ಮಧ್ಯದಲ್ಲೇ ಹೆಣ ಹೊತ್ತು ನಿಂತ ಮೃತ ವ್ಯಕ್ತಿಯ ಸಂಬAಧಿಕರು ಪರದಾಡಿದರು. ಹಲವು ವರ್ಷಗಳಿಂದ ಜಮೀನಿನ ರಸ್ತೆ ಮೂಲಕ ಸ್ಮಶಾನಕ್ಕೆ ಹೋಗುತ್ತಿದ್ದರು. ಮುಸ್ಲಿಂ ಸಮುದಾಯದವರು ಯಾರೇ ಮೃತಪಟ್ಟರು ಇದೇ ಸ್ಮಶಾನದಲ್ಲಿ ಹೂಳಲಾಗುತ್ತಿತ್ತು. ನಮ್ಮ ಜಮೀನು ರಸ್ತೆಯ ಮೂಲಕ ಸ್ಮಶಾನಕ್ಕೆ ಹೋಗೋದಕ್ಕೆ ದಾರಿ ಬಿಡೋದಿಲ್ಲ ಎಂದು ದಿಢೀರನೆ ಖಾಸಗಿ ವ್ಯಕ್ತಿ ಮುಳ್ಳು ತಂತಿ ಬೇಲಿ ಹಾಕಿದ್ದಾನೆ. ಇದರಿಂದಗಿ ಪಕ್ಕದ ಜಮೀನಿನಲ್ಲಿ ಸುತ್ತಾಕಿಕೊಂಡು ಹೋಗಿ ಸ್ಮಶಾನದಲ್ಲಿ ಅಂತ್ಯಸAಸ್ಕಾರ ಮಾಡಿದರು.

ಮಾಹಿತಿ ತಿಳಿಯುತ್ತಿದ್ದಂತೆ ತಾಲೂಕಾ ಆಡಳಿತ ಎಚ್ಚೇತ್ತುಕೊಂಡಿದೆ. ತಹಸೀಲ್ದಾರ್ ಶೃತಿ ಸೂಚನೆ ಮೇರೆಗೆ ಉಪ ತಹಸೀಲ್ದಾರ್ ಶ್ರೀಧರ ಅವರು ಭಾನುವಾರ ಖಾಸಗಿ ಜಮೀನಿನ ಮಾಲೀಕ ಹಾಕಿದ್ದ ತಂತಿ ಬೇಲಿ ತೆರವು ಮಾಡಿಸಿದ್ದಾರೆ. ಯಥಾ ಸ್ಥಿತಿ ಮುಂದುವರೆಯುವAತೆ ಖಾಸಗಿ ಜಮೀನಿನ ಮಾಲೀಕರಿಗೆ ಸೂಚನೆ ನೀಡಿದ್ದಾರೆ.