ಎನ್.ಆರ್.ಪುರ: ತುಂತುರು ಮಳೆ ನಡುವೆ ಕೋಟೆ ಮಾರಿಕಾಂಬ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಮಡಿಲಕ್ಕಿ, ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.
ರಾತ್ರಿ ಅಗ್ರಹಾರದಿಂದ ಹೊರಟ ಮೆರವಣಿಗೆ ಬೆಳಗಿನ ಜಾವ ಕೋಟೆ ಮಾರಿಕಾಂಬ ದೇವಸ್ಥಾನಕ್ಕೆ ಆಗಮಿಸಿತ್ತು. ನಂತರ ದೇವಿಯನ್ನು ಪ್ರತಿಷ್ಟಾಪಿಸಿ ಅಗ್ರಹಾರದಿಂದ ಪಟ್ಟಣದ ಬಸ್ ನಿಲ್ದಾಣದ ರಸ್ತೆ ಮೂಲಕ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪ್ರಭು ನಾಸಿಕ್ ಟ್ಯಾಬ್ಲೋ, ಉಡುಪಿಯ ಕಿಶೋರ್‌ರಾಜ್ ಥಾಯ್ಲೆಂಡ್ ಟೈಗರ್ ಗ್ರೂಪ್‌ನಿಂದ ರೋಡ್ ಶೋ, ದೊಡ್ಡ ನಂದಿ, ಶಿವ ಪಾರ್ವತಿ, ಚಿಕ್ಕಹನುಮ, ಕಾಲಭೈರವ, ಅಘೋರಿ, ಕಂಬಳ, ಜೋಡಿ ಎತ್ತು, ಹನುಮ ಮತ್ತು ವಾನರ ಸೇನೆ ಜನರ ಗಮನ ಸೆಳೆಯುತು. ಡಿಜೆ, ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.
ಮೆರವಣಿಗೆಯಲ್ಲಿ ಗ್ರಾಮ ದೇವತೆಗಳಾದ ಹಳೇಪೇಟೆ ಗುತ್ಯಮ್ಮ, ಮಡಬೂರು ದಾನಿವಾಸ ಶ್ರೀ ದುಗಾರ್ಂಬ ದೇವಿ ಹಾಗೂ ಮೇದರ ಬೀದಿಯ ಅಂತರಘಟ್ಟಮ್ಮ ದೇವರುಗಳ ಮೆರವಣೆಗೆ ನಡೆಸಲಾಯಿತು.
ಬುಧವಾರ ಮಧ್ಯಾಹ್ನ ಹಾಗೂ ಸಂಜೆ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಧಾರ್ಮಿಕ ಸಭೆ ನಡೆಯಿತು. ರಾತ್ರಿ ಕೊಪ್ಪದ ತಾಜ್ ಇವೆಂಟ್ಸ್ ಅವರಿಂದ ಸಂಗೀತ ಸಂಜೆ ನಡೆಯಿತು.
ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ವ್ಯಾಪಕ ಮಳೆಯಾಗಿದ್ದರಿಂದ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ತೊಂದರೆಯಾಯಿತು.