ಕಾನಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಮಾರಿಕಾಂಬ ದೇವಿಯ ಉತ್ಸವ ಅದ್ದೂರಿಯಾಗಿ ನೆರವೇರಿತು. 
ಜಿಲ್ಲೆ

ಮಾರಿಕಾಂಬ ದೇವಿ ಉತ್ಸವ ಅದ್ದೂರಿ

ಗಾಯತ್ರಿ ಮಾಲಿಪಾಟೀಲ್

ಕಾನಹೊಸಹಳ್ಳಿ: ಗ್ರಾಮದಲ್ಲಿ ಶ್ರೀ ಮಾರಿಕಾಂಬ ದೇವಿಯ ಎಡೆಪರವು ಮಂಗಳವಾರ ಭಕ್ತಿಯಿಂದ ನೆರವೇರಿತು. ದೇವಿಗೆ ಅಲಂಕಾರ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ತೇರಿನ ಬಳಿ ಕರೆತಂದು ಪೂಜೆ ಸಲ್ಲಿಸಿ ನಂತರ ಉತ್ಸವ ಮೂರ್ತಿ ಮೆರವಣಿಗೆ ಆರಂಭವಾಗಿ ಹೊರವಲಯದ ತೋಪಿನ ಮಾರಮ್ಮನ ಕಟ್ಟೆವರೆಗೂ ಸಾಗಿತು. ಭಕ್ತರು ಪೂಜೆ, ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ನಂತರ ಅನ್ನಸಂತರ್ಪಣೆ ನಡೆಯಿತು.