ಜಿಲ್ಲೆ

ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

Belagavi

ಅಥಣಿ: ಪಟ್ಟಣದ ಹೊರವಲಯದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದು 10,520 ರೂ. ಮೌಲ್ಯದ 526 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ನಿವಾಸಿಗಳಾದ ನಜೀರ್ ಹುಸೇನಸಾಬ ದ್ರಾಕ್ಷಿ(55) ಮತ್ತು ಭೀಮಸೇನ ವಿಷ್ಣು ಯಳಮಲ್ಲೆ (58) ಬಂಧಿತರು. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.