ಬೆಳಗಾವಿ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಯುವಕನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪಿಐ ಎಸ್.ಕೆ. ಕುರಗೋಡಿ, ಸಿಬ್ಬಂದಿ ಲಕ್ಷ್ಮಣ ಹುಂಡರದ, ಜಗದೀಶ ಬಾಗನವರ ಇತರರು ಇದ್ದಾರೆ. 
ಜಿಲ್ಲೆ

ಗಾಂಜಾ ಮಾರಾಟ, ಯುವಕರಿಬ್ಬರ ಬಂಧನ

ಬೆಳಗಾವಿ: ನಗರದಲ್ಲಿ ಶನಿವಾರ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿರುವ ಸಿಐಡಿ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದು, ಅವರ ಬಳಿಯಿದ್ದ 1,130 ಗ್ರಾಂ ಗಾಂಜಾ ಹಾಗೂ 1,250 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಅಕೀಬ್ ಜಾವೇದ್ ಮನಿಯಾರ್ (27) ಹಾಗೂ ಪೀರನವಾಡಿ ಅನಸಾರ ಗಲ್ಲಿಯ ಸೈಫ್‌ಅಲಿ ಮಾಡಿವಾಲೆ(27) ಬಂಧಿತ ಯುವಕರು. ಖಚಿತ ಮಾಹಿತಿ ಮೇರೆಗೆ ಸಿಐಡಿ ಘಟಕದ ಪಿಐ ಎಸ್.ಕೆ. ಕುರಗೋಡಿ ಹಾಗೂ ಸಿಬ್ಬಂದಿ ಅಯೋಧ್ಯಾ ನಗರದ ಬಳಿ ದಾಳಿ ನಡೆಸಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಅಕೀಬ್‌ನನ್ನು ಬಂಧಿಸಿ, ಆತನ ಬಳಿಯಿದ್ದ 610 ಗ್ರಾಂ ಗಾಂಜಾ, ಬೈಕ್ ಹಾಗೂ 530 ರೂ. ನಗದು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನಗರದ ಬೋಗಾರವೇಸ್‌ನ ಧರ್ಮವೀರ ಸಂಭಾಜಿ ವೃತ್ತದ ಬಳಿ ದಾಳಿ ನಡೆಸಿ, ಗಾಂಜಾ ಮಾರಾಟದಲ್ಲಿ ತೊಡಗಿದ್ದ ಸ್ೈಅಲಿ ಎಂಬಾತನನ್ನು ಬಂಧಿಸಿದ್ದಾರೆ. ಬೈಕ್ ಸಮೇತ 10,400 ರೂ. ಮೌಲ್ಯದ 520 ಗ್ರಾಂ ಗಾಂಜಾ ಹಾಗೂ 720 ರೂ.ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಲಕ್ಷ್ಮಣ ಹುಂಡರದ, ಜಗದೀಶ ಬಾಗನವರ, ಜಿ.ಆರ್. ಶಿರಸಂಗಿ, ಚಿದಂಬರ ಚಟ್ಟರಕ್ಕಿ ಇದ್ದರು. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.