ಜಿಲ್ಲೆ

ಅಪಘಾತ ಬೈಕ್ ಸವಾರ ಸಾವು

ಮಂಜುನಾಥ

ಮರಿಯಮ್ಮನಹಳ್ಳಿ: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಬೈಕ್ ಸವಾರ ಸಾವು, ಮೂವರಿಗೆ ಗಾಯಗಳಾದ ಘಟನೆ ಸಮೀಪ್ ಡಣಾಯಕನಕೆರೆ ಕ್ರಾಸ್ ಬಳಿಯ ರಾಷ್ಟಿçÃಯ ಹೆದ್ದಾರಿ 50ರಲ್ಲಿ ಭಾನುವಾರ ನಡೆದಿದೆ.

ಹೊಸಪೇಟೆಯ ಮ್ಯಾಸಕೇರಿ ನಿವಾಸಿ ತಾಯಪ್ಪ (40) ಮೃತ ಬೈಕ್ ಸವಾರ. ಪತ್ನಿ ರಾಧಾ (35), ಮಕ್ಕಳಾದ ದಿವ್ಯಾ (10) ಧ್ರುವ (08) ಗಾಯಾಳುಗಳು. ಕಾರಿನ ರಭಸಕ್ಕೆ ಬೈಕ್ ಸವಾರ ಕುಟುಂಬ ಸಮೇತ ನಾಲ್ಕೆöÊದು ಅಡಿ ಮೇಲೆ ಜಿಗಿಯುವ ಭಯನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಾಳುಗಳಿಗೆ ಬಳ್ಳಾರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಪ್ಪ ತನ್ನ ಪತ್ನಿ, ಮಕ್ಕಳೊಂದಿಗೆ ಬೈಕ್‌ನಲ್ಲಿ ಗರಗ ಗ್ರಾಮಕ್ಕೆ ತೆರಳಿದ್ದರು. ವಾಪಾಸ್ ಬರುವಾಗ ಈ ಘಟನೆ ನಡೆದಿದೆ.

ಹೊಸಪೇಟೆ ಕಡೆಯಿಂದ ಕೂಡ್ಲಿಗಿ ಕಡೆ ಹೊರಟಿದ್ದ ಕಾರು ರಭಸವಾಗಿ ಬಂದು, ಬೈಕ್‌ಗೆ ಗುದ್ದಿದ್ದ ಪರಿಣಾಮ ಬೈಕ್ ಸಮೇತ ಕುಟುಂಬಸ್ಥರು ಕೆಳಗೆ ಬಿದ್ದಿದ್ದಾರೆ. ಚಿಕಿತ್ಸೆಗಾಗಿ ಬಳ್ಳಾರಿಗೆಯ ಕೊಂಡೊಯ್ಯುವ ಮಾರ್ಗ ಮದ್ಯೆ ತಾಯಪ್ಪ ಮೃತಪಟ್ಟಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.