ಜಿಲ್ಲೆ

ಮಾರ್ಕೋಪೋಲೊ ಕಾರ್ಮಿಕರ ಸಮಸ್ಯೆ ಇತ್ಯರ್ಥಕ್ಕೆ ಲಾಡ್ ಸೂಚನೆ

ಮಂಜುನಾಥ ಅಂಗಡಿ

ಧಾರವಾಡ: ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಮಾರ್ಕೋಪೋಲೊ ಕಂಪನಿಯ ಕಾರ್ಮಿಕ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್, ಕಂಪನಿಯ ಅಽಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಲಾಡ್, ಕಾರ್ಮಿಕರ ವರ್ಗಾವಣೆ ಸಮಸ್ಯೆ ಪರಿಹರಿಸಲು ಕಾರ್ಮಿಕರೊಂದಿಗೆ ಸಭೆ ಜರುಗಿಸಿ ಪರಿಹರಿಸಬೇಕು ಎಂದರು.
ಟಾಟಾ ಮೋಟಾರ್ಸ್ ಕಂಪನಿಯ ಗ್ಲೋಬಲ್ ಹೆಡ್ ಸುಶಾಂತ, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಆಯುಕ್ತ ಅಕ್ರಂ ಪಾಷಾ, ಇತರರಿದ್ದರು.