ಗಂಗೊಳ್ಳಿ: ಬೈಂದೂರು ತಾಲೂಕು ಆಡಳಿತ ವತಿಯಿಂದ ತ್ರಾಸಿ-ಮರವಂತೆ ಕಡಲ ಕಿನಾರೆಯಲ್ಲಿ ಮಾನವ ಸರಪಳಿ ರಚಿಸಲಾಯಿತು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ರಾಜ್ಯದೆಲ್ಲೆಡೆ ಏಕಕಾಲದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ವಿಶ್ವ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ನಾವು ಪ್ರಜಾಪ್ರಭುತ್ವದ ಅನುಸರಿಸುವ ರೀತಿ ಎಲ್ಲರಿಗೂ ಮಾದರಿ ಎಂದರು.
ಸಂವಿಧಾನದ ಪ್ರಸ್ತಾಪನೆ ಓದುವುದು. ಜೈ ಹಿಂದ್, ಜೈ ಕರ್ಣಾಟಕ ಘೋಷಣೆ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯ ಕಂಡಿತು. ಕುಣಿತ ಭಜನೆ, ಸ್ತಬ್ಧಚಿತ್ರಗಳು ಗಮನ ಸೆಳೆಯಿತು. ಬೈಂದೂರು ತಹಸೀಲ್ದಾರ್ ಪ್ರದೀಪ್ ಆರ್., ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ, ಗಂಗೊಳ್ಳಿ ಪಿಎಸ್‌ಐಗಳಾದ ಹರೀಶ್ ಆರ್., ಬಸವರಾಜ ಕನಶೆಟ್ಟಿ, ಆರ್‌ಎ್ಒ ಜ್ಯೋತಿ, ಮರವಂತೆ ಗ್ರಾಪಂ ಅಧ್ಯಕ್ಷ ಲೋಕೇಶ್ ಖಾರ್ವಿ, ಪಿಡಿಒ ಗೀತಾ, ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ದೇವಾಡಿಗ ಮೊದಲಾದವರಿದ್ದರು. ತ್ರಾಸಿ ಗ್ರಾಪಂ ಪಿಡಿಒ ಶೋಭಾ ನಿರೂಪಿಸಿದರು. ಬೈಂದೂರು ತಾಪಂ ಇಒ ಭಾರತಿ ವಂದಿಸಿದರು.