ಬೆಳಗಾವಿ:ದೇಶದ ಸಮಗ್ರ ಅಭಿವೃದ್ಧಿ ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯದಲ್ಲಿ ಇ-ಆಡಳಿತಕ್ಕೆ ಮನಸೋತಿರುವ ನೆರೆಯ ಮಹಾರಾಷ್ಟ್ರ ಗಡಿ ಭಾಗದ ಹಳ್ಳಿಗಳಲ್ಲಿನ ಜನರು ಕರ್ನಾಟಕ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ 10ಗ್ರಾಪಂಗಳಲ್ಲಿ ಸೋಮವಾರ ನಿರ್ಣಯ ಕೈಗೊಂಡಿವೆ.
ಕಳೆದ ವರ್ಷ ಜತ್ತ ತಾಲೂಕಿನ 40ಹಳ್ಳಿಗಳ ಜನರು ಕರ್ನಾಟಕ ಸೇರಲು ಹೋರಾಟ ನಡೆಸಿದ್ದರು.
-ಮರಾಠಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ರುವವರು ಕರ್ನಾಟಕ ಸೇರಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.