ಬೆಂಗಳೂರು: 'ರನ್ ಅಡಿಕ್ಟ್' ರಾಜರಾಜೇಶ್ವರಿ ನಗರ ಸಂಸ್ಥೆಯು ನಗರದ ಬಾಲಕೃಷ್ಣ ಬಯಲು ರಂಗಮಂದಿರದಿಂದ ಆಯೋಜಿಸಿದ್ದ ಆರನೇ ವರ್ಷದ ಮ್ಯಾರಥಾನ್ ಓಟಕ್ಕೆ ಭಾನುವಾರ ಚಾಲನೆ ದೊರೆಯಿತು.
10 ಕಿ.ಮೀ, 5 ಕಿ.ಮೀ ಹಾಗೂ 3 ಕಿ.ಮೀ ವಿಭಾಗದಲ್ಲಿ ಸುಮಾರು 3,500ಕ್ಕೂ ಹೆಚ್ಚಿನ ಮಂದಿ ಭಾಗವಹಿಸಿದ್ದರು.
ರನ್ ಅಡಿಕ್ಟ್ ಸಂಸ್ಥೆ ಸ್ವಯಂಸೇವಕರಿಂದ ಮುನ್ನಡೆಸುವ ಲಾಭ ರಹಿತ ಸಂಸ್ಥೆಯಾಗಿದೆ. ಸಂಸ್ಥೆ ವತಿಯಿಂದ ಈವರೆಗೆ ಗ್ರಾಮೀಣ ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದುವರೆ ಲ ನೋಟ್ ಪುಸ್ತಕ, 700ಕ್ಕೂ ಹೆಚ್ಚು ಡೆಸ್ಕ್, ಆಟೋಟ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗಿದೆ.