ಜಿಲ್ಲೆ

ಮ್ಯಾರಥಾನ್ ಮತ್ತು ಟ್ರಕ್ಕಿಂಗ್ ಕಾರ್ಯಕ್ರಮ

ಸುನಿಲ್ ಪೊನ್ನೇಟಿ

ಕುಶಾಲನಗರ:

ಇಲ್ಲಿನ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬುಧವಾರ ಮ್ಯಾರಥಾನ್ ಮತ್ತು ಟ್ರಕಿಂಗ್ ಆಯೋಜಿಸಲಾಗಿತ್ತು. ಒಟ್ಟು 52 ಮಕ್ಕಳು ಮತ್ತು 25 ಪೋಷಕರು ಹಾಗೂ ಕ್ಲಬ್‌ನ ಎಲ್ಲಾ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು.

ಮ್ಯಾರಥಾನ್ ಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ವಿಜೇತರಿಗೆ ಭಾನುವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ.

ಹಾಕಿ, ಅಥ್ಲೆಟಿಕ್ಸ್ ಹಾಗೂ ಸ್ವಿಮಿಂಗ್ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅದೇ ದಿನ ಸರ್ಟಿಫಿಕೇಟ್ ವಿತರಿಸಲಾಗುವುದು ಎಂದು ಕ್ರೀಡಾ ಕಾರ್ಯದರ್ಶಿ ಬಿ.ಟಿ. ಪೂರ್ಣೇಶ್ ತಿಳಿಸಿದ್ದಾರೆ.