ಜಿಲ್ಲೆ

ಜೂ.1ರಂದು ನಿವೇಯಸ್ ಮಂಗಳೂರು ಮ್ಯಾರಥಾನ್‌ಗೆ ಚಾಲನೆ

Mangaluru - Hariprasad Rai



ಮಂಗಳೂರು : ಮಂಗಳೂರು ರನ್ನರ್ಸ್ ಇದರ ವತಿಯಿಂದ ನಿವೇಯಸ್ ಮಂಗಳೂರು ಮ್ಯಾರಥಾನ್ -2024 ನವಂಬರ್ 10ರಂದು ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮ್ಯಾರಥಾನ್‌ನ ಪೂರ್ವಭಾವಿ ಪ್ರಕ್ರಿಯೆಗಳಿಗೆ ಜೂ.1ರಂದು ಸಾಯಂಕಾಲ 5.30ಕ್ಕೆ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ಅಧಿಕೃತ ಚಾಲನೆ ನೀಡಲಾಗುವುದೆಂದು ನಿವೇಯಸ್ ಮಂಗಳೂರು ಮ್ಯಾರಥಾನ್‌ನ ನಿರ್ದೇಶಕ ಅಭಿಲಾಶ್ ಡೊಮಿನಿಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತುಳುನಟ ಅರವಿಂದ್ ಬೋಳಾರ್ ,ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಮಂಗಳೂರು ಸ್ಮಾರ್ಟ್ ಸಿಟಿಯ ವ್ಯವಸ್ಥಾಕ ನಿರ್ದೇಶಕ ರಾಜು ಕೆ, ಮತ್ತು ನಿವೇಯಸ್ ಸೊಲ್ಯೂಶನ್ಸ್‌ನ ಸಿಇಒ ಸುಯೋಗ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ನಿವೇಯಸ್ ಮಂಗಳೂರು ಮ್ಯಾರಥಾನ್ ಅತಿ ದೊಡ್ಡ ಮ್ಯಾರಥಾನ್ ಆಗಿದ್ದು , ಫುಲ್ ಮ್ಯಾರಥಾನ್ 32.18 ಕಿ.ಮೀ, ಹಾಫ್ ಮ್ಯಾರಥಾನ್ 10 ಕಿ.ಮೀ , 5ಕಿ.ಮೀ ಮತ್ತು ಗಮ್ಮತ್ ರನ್ (2 ಕಿ.ಮೀ) ವಿಭಾಗಗಳಲ್ಲಿ ನಡೆಯಲಿದೆ. ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ 5ಸಾವಿರ ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಮಂಗಳೂರು ರನ್ನರ್ ಕ್ಲಬ್‌ನ ಕಾರ್ಯದರ್ಶಿ ಅಮರ್ ಕಾಮತ್, ಪ್ರಾಚಿ ಕಾಮತ್ ಉಪಸ್ಥಿತರಿದ್ದರು.