ಜಿಲ್ಲೆ

ಮರಾಠಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಮೂಡಲಗಿ: ಸಾರಿಗೆ ಬಸ್​ ನಿರ್ವಾಹಕನ ಮೇಲಿನ ಮರಾಠಿಗರ ದೌರ್ಜನ್ಯ ಖಂಡಿಸಿ ಕನ್ನಡಪರ ಸಂಟನೆಗಳ ಒಕ್ಕೂಟದ ಕಾರ್ಯಕರ್ತರು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರ್​ ಶಿವಾನಂದ ಬಬಲಿಗೆ ಮನವಿ ಸಲ್ಲಿಸಿದರು.

ಕನ್ನಡಪರ ಸಂಟನೆ ಮುಖಂಡ ಸಚಿನ್​ ಲೆಂಕೆನ್ನವರ, ಶಿವರೆಡ್ಡಿ ಹುಚ್ಚರೆಡ್ಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಹೆಚ್ಚುತ್ತಿದ್ದು ಖಂಡನೀಯ. ರಾಜ್ಯದ ಬಸ್​ ನಿರ್ವಾಹಕನ ಮೇಲೆ ದೌರ್ಜನ್ಯ ಮಾಡಿದ ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸಂಟನೆಯ ಮುಖಂಡರಾದ ಲ$್ಮ್ಮಣ ಮೇಳಿಗೇರಿ, ನಂಜುಂಡಿ ಸರ್ವಿ, ಪ್ರಕಾಶ ಸಣ್ಣಕ್ಕಿ, ಸಂಜು ಯಾಕ್ಸಂಬಿ, ಸಂತೋಷ ಕೆಳಗಡೆ, ಪ್ರಭು ತೇರದಾಳ ಇತರರಿದ್ದರು.