ಜಿಲ್ಲೆ

ಮರಾಠಿ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹ

ಬೈಲಹೊಂಗಲ: ಬಸ್ ನಿರ್ವಾಹಕನ ಮೇಲೆ ಪುಂಡಾಟಿಕೆ ನಡೆಸಿದ ಮರಾಠಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆ ಪಟ್ಟಣದ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಸಂಘಟನೆ ತಾಲೂಕಾಧ್ಯಕ್ಷ ರಾಜು ಬೋಳನ್ನವರ ಮಾತನಾಡಿ, ಈತ್ತಿಚಿನ ದಿನಗಳಲ್ಲಿ ಕನ್ನಡಿಗರು ನಿರಂತರವಾಗಿ ವಿವಿಧ ಭಾಷಿಕರಿಂದ ಹಲ್ಲೆಗೆ ಒಳಗಾಗುತ್ತಿದ್ದಾರೆ. ಮರಾಠಿ ಬರುವುದಿಲ್ಲ ಎಂಬ ಕಾರಣಕ್ಕಾಗಿ ಬಸ್ ನಿರ್ವಾಹಕ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೂಗೊಳ್ಳಬೇಕು. ಇಲ್ಲವಾದಲ್ಲಿ ಬೆಳಗಾವಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆಲ ಗಂಟೆ ರಸ್ತೆ ತಡೆ ನಡೆಸಿ, ಪ್ರತಿಭಟನೆ ಕೈಗೊಂಡ ಸಂಘಟನಾಕಾರರು ಪುಂಡಾಟಿಕೆ ತೋರಿದ ಮರಾಠಿಗರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಭಾಜಿ, ಕಿರಣ ಬೆಳಗಾವಿಮಠ, ಅಭಿ ಕಲಾಲ, ಈರಣ್ಣ ಮುನವಳ್ಳಿ, ಸಿದ್ದು ಗೌಡರ, ಆನಂದ ಪಾಟೀಲ, ಸೋಹೆಲ ಬಾಗೇವಾಡಿ, ಮೈನು ನಧಾಪ ಇತರರಿದ್ದರು.