ಜಿಲ್ಲೆ

ಮರಾಠಿ ಪುಂಡರ ಹಾವಳಿ, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹೋರಾಟ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಮರಾಠಿ ಪುಂಡರ ಹಾವಳಿಯ ಸಂಪೂರ್ಣ ನಿಯಂತ್ರಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಮಾ.22 ರಂದು ಕರ್ನಾಟಕ ಬಂದ್ ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಇಲ್ಲಿನ ಕನ್ನಡಪರ ಹೋರಾಟಗಾರರು ಬಹುತೇಕ ಬೆಂಗಳೂರಿನಲ್ಲಿ ಬಂದ್ ಯಶಸ್ವಿಗೊಳಿಸುವ ಜಾಗೃತ ರ್ಯಾಲಿಗಳಲ್ಲಿ ಭಾಗವಹಿಸಿದ್ದು ಪ್ರಸ್ತುತ ಜಿಲ್ಲೆಯಲ್ಲಿ ಮಾತ್ರ ಪೂರ್ವ ಸಿದ್ಧತೆಗಳು ಮಾತ್ರ ಕಾಣುತ್ತಿಲ್ಲ. ಧ್ವನಿ ವರ್ಧಕಗಳ ಮೂಲಕ ಪ್ರಚಾರ, ಬಂದ್ ಪೂರ್ವ ಬೈಕ್ ರ್ಯಾಲಿ, ಸಾರ್ವಜನಿಕರ ಸಹಕಾರ ಬಯಸುವ ಕೆಲಸವಾಗಿಲ್ಲ. ಇಲ್ಲಿನ ಬಹುತೇಕ ಸಂ ಸಂಸ್ಥೆಗಳು ತಟಸ್ಥ ಧೋರಣೆಯಲ್ಲಿವೆ. ಇದರಿಂದ ಈ ಭಾಗದಲ್ಲಿ ಬಂದ್ ಯಶಸ್ವಿಯಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ.

*ಸಾಂಕೇತಿಕ ಪ್ರತಿಭಟನೆ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ, ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆಯ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಡು ನುಡಿಯ ವಿಚಾರವಾಗಿ ರಾಜ್ಯದಲ್ಲಿ ಹೋರಾಟ ನಡೆಯುತ್ತಿದೆ. ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಬಂದ್ ಆಚರಿಸದಿದ್ದರೂ ಸಹ ಈ ಭಾಗದಿಂದ ಒತ್ತಾಯದ ಕೂಗು ಕೇಳಿಸಬೇಕು. ನೈತಿಕ ಬೆಂಬಲವನ್ನು ನೀಡಬೇಕೆಂಬ ಧೋರಣೆಯನ್ನು ಕರವೇ (ಕೆಲ ಬಣ), ಕನ್ನಡ ಸೇನೆ ಸೇರಿದಂತೆ ವಿವಿಧ ಸಂಟನೆಗಳು ಪ್ರದರ್ಶಿಸಿವೆ.


*ಎಂದಿನಂತೆ ನಿರ್ವಹಣೆ
ಎಂದಿನಂತೆ ಶಾಲಾ ಕಾಲೇಜುಗಳು, ಅಂಗಡಿ, ಹೋಟೆಲ್, ಪೆಟ್ರೋಲ್ ಬಂಕ್, ಕಚೇರಿಗಳು, ಸಿನಿಮಾ ಮಂದಿರಗಳು ಕಾರ್ಯ ನಿರ್ವಹಿಸಲಿದ್ದು ಯಾವುದೇ ರ್ನಿಬಂಧವಿಲ್ಲದೇ ವಾಹನಗಳು ಸಂಚರಿಸಲಿವೆ. ಎಸ್ಸೆಸ್ಸೆಲ್ಸಿ ಪರೀೆ ಶನಿವಾರ ನಡೆಯುವುದಿಲ್ಲ. ಇದರಿಂದ ಮನೆಯಲ್ಲಿ ಸಜ್ಜಾಗಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ಹೋರಾಟದ ಬಿಸಿ ತಟ್ಟುವುದಿಲ್ಲ. ಉಳಿದಂತೆ ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ಸೇರಿದಂತೆ ಇತರ ಎಲ್ಲ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಪ್ರಾಂಶುಪಾಲರು ಸೂಚಿಸಿದ್ದಾರೆ.  


*ಅನುಮತಿ ಸಿಕ್ಕಿಲ್ಲ, ಕ್ರಮ
ಚಿಕ್ಕಬಳ್ಳಾಪುರ ಬಂದ್ ಆಚರಣೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯು ಅನುಮತಿಯನ್ನು ನೀಡಿಲ್ಲ. ಇನ್ನು ಬಲವಂತದಿಂದ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು, ವಾಹನ ಮತ್ತು ಜನ ಸಂಚಾರ ತಡೆಯಲು ಯತ್ನಿಸಿದ್ದಲ್ಲಿ ನಿರ್ದಾಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಹೋರಾಟದ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಮನವಿ ಪತ್ರ ಸಲ್ಲಿಸಲು ಅವಕಾಶ ಇದೆ ಎಂಬುದಾಗಿ ತಿಳಿಸಲಾಗಿದೆ.