ಜಿಲ್ಲೆ

ಮಾರಟೇಶ್ವರ ರಥೋತ್ಸವ ಅದ್ದೂರಿ

Gangavati - Desk - Veeresh S Ullagaddi

ಸಿರವಾರ: ಕಲ್ಲೂರಿನಲ್ಲಿ ಮಾರಟೇಶ್ವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಶ್ರೀ ಮಾರಟೇಶ್ವರ, ಕಾಳಿಕಾದೇವಿ ಹಾಗೂ ಪಂಚಲಿಂಗ ದೇವಸ್ಥಾನಗಳಿಗೆ ಮಂಗಳಾರತಿ ಹಾಗೂ ಇತರ ಪೂಜಾ ಕೈಂಕರ್ಯಗಳೊಂದಿಗೆ ಕಲಶಾರೋಹಣ ನಡೆಯಿತು. ದೇವಸ್ಥಾನದ ಗರ್ಭಗುಡಿಯಿಂದ ವಾದ್ಯಮೇಳದೊಂದಿಗೆ ಮಾರಟೇಶ್ವರ, ಕಾಳಿಕಾದೇವಿ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತರಲಾಯಿತು. ಗಬ್ಬೂರು ಬೂದಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲ್ಲೂರಿನ ಅಡವೀಶ್ವರ ಮಠದ ಶಂಭುಲಿಂಗೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.