ಜಿಲ್ಲೆ

ಮರಾಠ ಸಮುದಾಯಗಳ ಅಭಿವೃದ್ದಿ, ವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Gadag - Shivanand Hiremath

ಗದಗ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ 2023-24 ನೇ ಸಾಲಿನಲ್ಲಿ  ಶಹಜೀರಾಜೀ ಸಮೃದ್ಧಿ ಯೋಜನೆ, ಜೀಜಾವು- ಜಲಭಾಗ್ಯ ಯೋಜನೆ, ಶೈಕ್ಷಣಿಕ ಸಾಲ ಯೋಜನೆಗಳಾದ ಅರಿವು ಶೈಕ್ಷಣಿಕ ಸಾಲ ಯೋಜನೆ, ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೊಜನೆ, ರಾಜಶ್ರೀ ಶಾಹು ಮಹಾರಾಜ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಮರಾಠ ಮಿಲ್ಟ್ರಿ ಹೋಟೆಲ್ ಯೋಜನೆ, ಸ್ವಯಂ ಉದ್ಯೋಗ ಸಾಲ ಯೊಜನೆ, ಸ್ವಾವಲಂಬಿ ಸಾರಥಿ ಯೊಜನೆ, ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿದ್ದು, ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಜಿಲ್ಲಾ ಆಡಳಿತ ಭವನ, ರೂ.ನಂ. 202, ಹುಬ್ಬಳ್ಳಿ ರಸ್ತೆ , ಗದಗ ಈ ವಿಳಾಸಕ್ಕೆ ಹಾಗೂ ಯೋಜನೆಗಳ ಮಾರ್ಗಸೂಚಿಗಳನ್ನು , ಹೆಚ್ಚಿನ ವಿವರಗಳಿಗಾಗಿ   https://kmcdc.karnataka.gov.in  ಇಲ್ಲಿ ಪಡೆಯಬಹುದಾಗಿದೆ.