ಜಿಲ್ಲೆ

ನಾಳೆ ಹಲವಡೆ ವಿದ್ಯುತ್ ನಿಲುಗಡೆ

ಮಂಗಳೂರು: ಮೆಸ್ಕಾಂ ವ್ಯಾಪ್ತಿಯ 33/11 ಕೆವಿ ನೆಹರೂಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಮಾರ್ಕೆಟ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಫೆ.13ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 5 ಗಂಟೆಯವರೆಗೆ ಸೆಂಟ್ರಲ್ ಮಾರ್ಕೆಟ್, ಜೆ.ಹೆಚ್.ಎಸ್. ರೋಡ್, ಕ್ಲಾಕ್ ಟವರ್, ಜ್ಯುವೆಲ್ಲ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 33/11ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ವೈದ್ಯನಾಥನಗರ ಫೀಡರ್‌ನಲ್ಲಿ ಮತ್ತು 33/11ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ 11ಕೆವಿ ಫಳ್ನೀರ್ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಅತ್ತಾವರ ಕಟ್ಟೆ, ಮೆಸ್ಕಾಂ ಆಫೀಸ್, ವೈದ್ಯನಾಥನಗರ, ಅತ್ತಾವರ 5ನೇ ಕ್ರಾಸ್, ಕಂಕನಾಡಿ ಮಾರ್ಕೆಟ್, ಹೈಲ್ಯಾಂಡ್, ಯುನಿಟಿ ಹಾಸ್ಪಿಟಲ್, ಸೈಂಟ್ ಮೆರೀಸ್ ಸ್ಕೂಲ್, ವಾಸ್‌ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ಮುತ್ತಪ್ಪ ಟೆಂಪಲ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಮತ್ತು ವ್ಯವಸ್ಥೆ ಸುಧಾರಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಮಿಲಾಗ್ರಿಸ್, ಹಂಪನಕಟ್ಟ, ಮಾಂಡೋವಿ ಮೋಟಾರ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 110/33/11 ಕೆವಿ ಜೆಪ್ಪು ಉಪಕೇಂದ್ರದಿಂದ ಹೊರಡುವ 11ಕೆವಿ ಗೋರಿಗುಡ್ಡ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಗೋರಿಗುಡ್ಡ, ಗೋರಿಗುಡ್ಡ ನಾಗಬನ, ಗುರುಪ್ರಸಾದ್ ಲೇನ್, ಕೇಂದ್ರಿಯ ವಿದ್ಯಾಲಯ, ಅಂಗಡಿ ಮಾರ್, ರಿಲಾಯನ್ಸ್, ಗುರುಪ್ರಸಾದ್, , ಉಜ್ಜೋಡಿ, ಮಾರುತಿ ಗ್ಯಾರೇಜ್, ಸಿಟಿ ಗೇಟ್, ವಿಶ್ವಾಸ್ ಗ್ರೀನ್ ವ್ಯೆ, ಎಕ್ಕೂರುಗುಡ್ಡ, ಅಯ್ಯಪ್ಪ ಭಜನಾ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.