ಮಂಗಳೂರು: ಮೆಸ್ಕಾಂ 110/33/11 ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11ಕೆವಿ ಬಿಜೈ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಾ.5 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೆ.ಎಸ್.ಆರ್.ಟಿ.ಸಿ ಎದುರು, ಬಿಜೈ ಮೈನ್ ರೋಡ್, ಬಿಜೈ ಚರ್ಚ್ ರೋಡ್, ಬಿಜೈ ನ್ಯೂ ರೋಡ್, ಎಂ.ಸಿ.ಎಫ್ ಕಾಲೊನಿ, ಆನೆಗುಂಡಿ, ಸಂಕೈಗುಡ್ಡ, ಸಂಕೈಗುಡ್ಡ ಗ್ಯಾಸ್ ಗೋಡೌನ್, ರಾಮಕೃಷ್ಣ ಭಜನಾ ಮಂದಿರ, ನೋಡುಲೇನ್, ಬಟ್ಟಗುಡ್ಡ, ಬಿಜೈ ಮ್ಯೂಸಿಯಂ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 33/11ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ ಕರಾವಳಿ ಫೀಡರ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಮಂಗಳೂರು ನಸಿರ್ಂಗ್ ಹೋಂ, ಲೋವರ್ ಅಪ್ಪರ್ ಬೆಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.