ಜಿಲ್ಲೆ

ಇಂದು ಹಲವಡೆ ವಿದ್ಯುತ್ ನಿಲುಗಡೆ

Mangaluru - Shravan Kumar Nala

ಮಂಗಳೂರು: ಮೆಸ್ಕಾಂ 110/33/11 ಕೆವಿ ಎಸ್.ಆರ್.ಎಸ್ ಕಾವೂರು ಉಪಕೇಂದ್ರದಿಂದ ಹೊರಡುವ 11 ಕೆವಿ ವಾಮಂಜೂರು ಫೀಡರ್‌ಗಳಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ನ.14ರಂದು ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಪಚ್ಚನಾಡಿ, ದೇವಿನಗರ, ವಾಮಂಜೂರು, ಮಂಗಳಾನಗರ, ಅಮೃತನಗರ, ಆರ್.ಟಿ.ಒ ಟೆಸ್ಟ್ ಯಾರ್ಡ್, ಸಂತೋಷನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.