ಜಿಲ್ಲೆ

ನ.12ರಂದು ಹಲವಡೆ ವಿದ್ಯುತ್ ನಿಲುಗಡೆ

Mangaluru - Shravan Kumar Nala

ಮಂಗಳೂರು: ಮೆಸ್ಕಾಂ 110/33/11ಕೆವಿ ಜೆಪ್ಪು ಉಪಕೇಂದ್ರದಿಂದ ಹೊರಡುವ 11ಕೆವಿ ವೆಲೆನ್ಸಿಯ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಮತ್ತು ವ್ಯವಸ್ಥೆ ಸುಧಾರಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ನ.12ರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಗೋರಿಗುಡ್ಡ, ಪಂಪ್‌ವೆಲ್, ಸುವರ್ಣ ರಸ್ತೆ, ಕಂಕನಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರೀಯಲ್ ಫೀಡರ್ ಮತ್ತು 11ಕೆವಿ ದತ್ತನಗರ ಫೀಡರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಬಿಕರ್ನಕಟ್ಟೆ, ಕಲಾಯಿ ಕಂಡೆಟ್ಟು, ಜಯಶ್ರೀಗೇಟ್, ನಾಯ್ಗರಲೇನ್, ದತ್ತನಗರ, ಮೇಕೆದಗುಡ್ಡೆ, ವಲ್ಲಿ ಕಂಪೌಂಡ್, ಪದವು, ಶರ್ಬತ್ ಕಟ್ಟೆ, ಇಂಡಸ್ಟ್ರಿಯಲ್ ಎಸ್ಟೇಟ್ ಏರಿಯಾ, ಯೆಯ್ಯಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 33/11 ಕೆವಿ ನೆಹರೂಮೈದಾನ ಉಪಕೇಂದ್ರವನ್ನು 110/11ಕೆವಿ ವಿದ್ಯುತ್ ಉಪಕೇಂದ್ರವನ್ನಾಗಿ ಉನ್ನತೀಕರಿಸುವ ಕಾಮಗಾರಿಯ ಸಲುವಾಗಿ 33/11ಕೆವಿ ನೆಹರೂಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ವಿವೇಕ್ ಮೋಟಾರ್ಸ್ ಮತ್ತು 11ಕೆವಿ ಸೌತ್‌ವಾರ್ಪ್ ಫೀಡರ್‌ಗಳಲ್ಲಿ ಡಿ.ಸಿ ಆಫೀಸ್, ಉಪಧಕ್ಕೆ, ಪೋರ್ಟ್ ರೋಡ್, ಧಕ್ಕೆ, ಸೈಂಟ್ ಆನ್ಸ್, ಸಂಜೆವಾಣಿ, ನೀರೇಶ್ವಲ್ಯ ರಸ್ತೆ, ಗೂಡ್‌ಶೆಡ್ ರಸ್ತೆ, ಬದ್ರಿಯಾ, ಓಲ್ಡ್ ಕೆಂಟ್ ರೋಡ್, ಜೆ.ಎಂ ಕ್ರಾಸ್ ರೋಡ್ ಮೈದಾನ 3ನೇ ಕ್ರಾಸ್, ಮೈದಾನ 4ನೇ ಕ್ರಾಸ್, ಡಿಸಿ ಆಫೀಸ್, ಉಪಧಕ್ಕೆ, ಪೋರ್ಟ್‌ರೋಡ್, ಧಕ್ಕೆ, ನೀರೇಶ್ವಲ್ಯ ರಸ್ತೆ, ಗೂಡ್‌ಶೆಡ್ ರಸ್ತೆ, ಬದ್ರಿಯಾ, ಓಲ್ಡ್ ಪೋರ್ಟ್, ಜೆ.ಎಂ ಕ್ರಾಸ್ ರೋಡ್ ಬೀಬೀ ಅಲಾಬಿ ರಸ್ತೆ, ರಾವ್ ರಾವ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 110/11 ಕೆವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಇರುವೈಲು, ಪುಚ್ಚೆಮೊಗರು ಮತ್ತು ಗಾಂಧೀನಗರ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮಾಸ್ತಿಕಟ್ಟೆ, ಶೇಡಿಗುರಿ, ಹೊಸಬೆಟ್ಟು, ಇರುವೈಲ್, ಹೊಸ್ಮಾರ್ ಪದವು, ಕೊನ್ನೆಪದವು, ಮಹಾವೀರ ಕಾಲೇಜ್ ರೋಡ್, ಪುಚ್ಚೆಮೊಗರು ವಾಟರ್ ಸಪ್ಲೈ, ಮೂಡಬಿದ್ರೆ ಪೇಟೆ, ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಣೆಯಲ್ಲಿ ತಿಳಿಸಿದೆ.