ಜಿಲ್ಲೆ

ನ.11ರಂದು ಹಲವಡೆ ವಿದ್ಯುತ್ ನಿಲುಗಡೆ

Mangaluru - Shravan Kumar Nala

ಮಂಗಳೂರು: ಮೆಸ್ಕಾಂ 33/11ಕೆವಿ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆವಿ ನಂದಿಗುಡ್ಡ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ನ.11ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೋಟಿ ಚೆನ್ನಯ ಸರ್ಕಲ್, ಯೆನಪೋಯ ಕ್ಲಸ್ಟರ್, ಬಾಬುಗುಡ್ಡೆ, ಜೋಸೆಫ್ ನಗರ, ಉಮಾಮಹೇಶ್ವರ ಟೆಂಪಲ್, ಮಣಿಪಾಲ್ ಸ್ಕೂಲ್ ರಸ್ತೆ, ಅತ್ತಾವರ ಸ್ಕೂಲ್, ಬಿ.ವಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.