ಜಿಲ್ಲೆ

ಪದ್ಮನಾಭ ಸೋಮಾಯಾಜಿ ಬಗ್ಗೆ ಅನೇಕರಿಗೆ ತಿಳಿದಿಲ್ಲ: ಡಾ.ಮಲ್ಲೆಪುರಂ ಜಿ.ವೆಂಕಟೇಶ ಬೇಸರ

ಬೆಂಗಳೂರು: ಕನ್ನಡ, ಸಂಸ್ಕೃತ,ಯಕ್ಷಗಾನ ಕುರಿತು ಅಪಾರ ಪಾಂಡಿತ್ಯ ಹೊಂದಿದ್ದ ಕಾದಂಬರಿಕಾರ ಬಿ.ಪದ್ಮನಾಭ ಸೋಮಾಯಾಜಿ ಬಗ್ಗೆ ಅನೇಕ ವಿದ್ವಾಂಸರಿಗೆ ತಿಳಿದಿಲ್ಲ ಎಂದು ಕರ್ನಾಟಕ ಸಂಸತ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲೆಪುರಂ ಜಿ.ವೆಂಕಟೇಶ ಬೇಸರ ವ್ಯಕ್ತಪಡಿಸಿದ್ದಾರೆ.

ವಿಕ್ರಮ್​ ಪ್ರಕಾಶನ ಬಸವನಗುಡಿಯ ನ್ಯಾಷನಲ್​ ಕಾಲೇಜಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಿ.ಪದ್ಮನಾಭ ಸೋಮಾಯಾಜಿ ಬರೆದಿರುವ "ಕನ್ನಡ ಕೋಗಿಲೆ ಮುದ್ದಣ', ಯಕ್ಸಕನ್ಯೆ ಸೇರಿ 4 ಪುಸ್ತಕಗಳ ಮರು ಬಿಡುಗಡೆ ಹಾಗೂ ಲೇಖಕಿ ಊರ್ಮಿಳಾ ರಾವ್​ ರಚಿಸಿರುವ "ತೆರೆದ ಪುಸ್ತಕ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪದ್ಮನಾಭ ಸೋಮಾಯಾಜಿ, ಮಹಾಕವಿ ಕಾಳಿದಾಸ ಕುರಿತು ಚಿತ್ರಣವನ್ನು ಕಾದಂಬರಿಯಲ್ಲಿ ಅದ್ಭುತವಾಗಿ ಬರೆದಿದ್ದಾರೆ. ಇದು ಕನ್ನಡದಲ್ಲಿ ಏಕೈಕವಾಗಿ ಕಾದಂಬರಿ ಆಗಿದೆ. ಮೊಟ್ಟ ಮೊದಲ ಬಾರಿ ಕವಿಯ ವೈಯಕ್ತಿಕ ಕುರಿತು ಕಾದಂಬರಿ ಬರೆದವರು ಇವರು. ಕಾದಂಬರಿ ಕಟ್ಟುವಾಗ ಸಂಪೂರ್ಣ ತನ್ಮಯರಾಗಿದ್ದರು. ಇದು ಕೃತಿ ಅಥವಾ ಬೆರವಣಿಗೆಗೆ ಇರುವ ಶಕ್ತಿ. ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ಒಳ್ಳೆಯ ಕೃತಿಗಳನ್ನು ಕೊಡುಗೆ ನೀಡುವ ಮೂಲಕ ಪದ್ಮನಾಭ ಸೋಮಾಯಜಿ ಜೀವಂತರಾಗಿದ್ದಾರೆ. ಇವರು ರಚಿಸಿರುವ "ಕವಿಚಕ್ರವರ್ತಿ ರನ್ನ' ಕಾದಂಬರಿ ಬಂದರೆ ಸರಣಿ ಕಾದಂಬರಿಗಳು ಬಂದಂತಾಗುತ್ತದೆ ಎಂದು ಹೇಳಿದರು. "ಥಟ್ಟಂತ ಹೇಳಿ'ಖ್ಯಾತಿಯ ಡಾ.ನಾ.ಸೋಮೇಶ್ವರ,ಸಾಹಿತಿ ಡಾ.ಗಣಪತಿ ಹೆಗಡೆ, ಸಂಸತ ಅಧ್ಯಾಪಕ ಡಾ.ಗಣಪತಿ ಭಟ್​, ಲೇಖಕಿ ಊರ್ಮಿಳಾ ರಾವ್​ ಮತ್ತಿತರರಿದ್ದರು.

ಹಿಂದು ಧರ್ಮ ಪ್ರಶ್ನಿಸುವ ಹಕ್ಕು ಕೊಟ್ಟಿದೆ:  ಹಿಂದು ಧರ್ಮ ಪ್ರಶ್ನೆ ಮಾಡುವ ಹಕ್ಕು ಕೊಟ್ಟಿದೆ. ಆದರೆ, ಬೇರೆ ಧರ್ಮದಲ್ಲಿ ಪ್ರಶ್ನೆ ಮಾಡುವ ಹಕ್ಕು ಇಲ್ಲ. ಪ್ರಶ್ನೆ ಮಾಡುವ ಮೂಲಕ ಅನುಮಾನವನ್ನು ಬಗೆಹರಿಸಿಕೊಳ್ಳಬೇಕು. "ಇಷ್ಟವಾದರೆ ಬದುಕು ಇಲ್ಲವಾದರೆ ನಾಸ್ತಿಕ'ನಾಗಿ ಇರು ಎಂಬುದನ್ನೂ ಹಿಂದು ಧರ್ಮ ಹೇಳುತ್ತದೆ ಎಂದು ಹೈಕೋರ್ಟ್​ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದ್ದಾರೆ. ಮಹತ್ವದ ಕೃತಿಗಳನ್ನು ಪೋಷಿಸುವುದು ಸಮಾಜದ ಕರ್ತವ್ಯ. ಆದರೆ, ಹಿಂದೆ ಪ್ರಕಟಗೊಂಡಿರುವ ಕೃತಿಗಳು ಸಿಗುತ್ತಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ಬರುವಂತಹ ನಾಟಕೀಯ ಬೆಳವಣಿಗೆಗಳ ಕುರಿತು "ಯಕ್ಸಕನ್ಯೆ' ಪುಸ್ತಕದಲ್ಲಿ ಉಲ್ಲೆಖಿಸಲಾಗಿದೆ. ಪದ್ಮನಾಭ ಸೋಮಾಯಾಜಿ ಬರೆದಿರುವ 4 ಕೃತಿಗಳು ಒಂದಿಲ್ಲೊಂದು ಮಹತ್ವದ ವಿಷಯಗಳಿವೆ. ಎಲ್ಲ ಕೃತಿಗಳು ಓದಿಸಿಕೊಂಡು ಹೋಗುತ್ತಿವೆ. ಬಿಡುವಿನ ಸಮಯದಲ್ಲಿ ನಾನು ಪುಸ್ತಕ ಓದುತ್ತೇನೆ. ಆದರೆ, ರೀಡಿಂಗ್​ ಬದಲು ಸ್ಟಡಿಂಗ್​ ವರ್ಗಕ್ಕೆ ಸೇರಿದವನು ಎಂದರು.