ಜಿಲ್ಲೆ

ಅಪಘಾತದಲ್ಲಿ ಹಲವರಿಗೆ ಗಾಯ

ಎನ್.ವೆಂಕಟೇಶ್

ಚಿಂತಾಮಣಿ: ನಗರದ ಕನ್ನಂಪಲ್ಲಿ ಬಳಿ ಭಾನುವಾರ ಪಾದಚಾರಿಗಳಿಗೆ ಬೈಕ್​ ಡಿಕ್ಕಿಯಾಗಿ ಮಗು ಸೇರಿ ಮೂವರು ಗಾಯಗೊಂಡರೆ, ಬೈಕ್​ ಸವಾರರಿಬ್ಬರು ಬಿದ್ದು ಗಾಯಗೊಂಡಿದ್ದಾರೆ. ನಗರದ ಕನ್ನಂಪಲ್ಲಿಯ ನಿವಾಸಿಗಳಾದ ಕಿಟ್ಟಪ್ಪ, ನಂದಿನಿ ಮತ್ತು 1 ವರ್ಷದ ಮಗು ಹಾಗೂ ಅಪಘಾತ ಎಸಗಿದ ಬೈಕ್​ ಸವಾರರು ಅಂಬಾಜಿದುರ್ಗ ಹೋಬಳಿ ಉಪ್ಪಾರಪೇಟೆಯ ಶೇಕ್​ ಜಮೀರ್​ ಮತ್ತು ಸೈಯದ್​ ಅವೇಜ್​ ಗಾಯಗೊಂಡವರು. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.