??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಷೇರುದಾರರ ಅನುಕೂಲಕ್ಕಾಗಿ ಹಲವು ಸೌಲಭ್ಯ

Mysuru - Desk - Naveen Kumar H P

ಮದ್ದೂರು : ಷೇರುದಾರರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಸಂಘವು ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಸಂಘದ ಉನ್ನತೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕಾವೇರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಸಿ.ರೇಣುಕುಮಾರ್ ತಿಳಿಸಿದರು.


ಪಟ್ಟಣದ ತಾಲೂಕು ಪಂಚಾಯಿತಿ ವಸತಿ ಗೃಹದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾವೇರಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು 1.5 ಲಕ್ಷ ರೂ. ಲಾಭ ಗಳಿಕೆಯತ್ತ ಮುಖಮಾಡಿದ್ದು, ಈಗಾಗಲೇ 1300 ಷೇರುದಾರರನ್ನು ಹೊಂದಿದ್ದು 95 ಲಕ್ಷ ರೂ. ಗೂ ಅಧಿಕ ಸಾಲ ವಿತರಣೆ ಮಾಡಿ ಸಾಲ ಮರುಪಾವತಿಯಲ್ಲೂ ಪ್ರಥಮ ಸ್ಥಾನದಲ್ಲಿದ್ದು ವ್ಯಾಪಾರ, ಪಿಗ್ಮಿ, ಆಭರಣ ಸೇರಿದಂತೆ ಇನ್ನಿತರೆ ಸಾಲ ಸೌಲಭ್ಯಗಳನ್ನು ವಿತರಿಸಿ ಷೇರುದಾರರ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದಾಗಿ ಹೇಳಿದರು.


ಆಡಳಿತ ಮಂಡಳಿಯ ಸೂಚನೆಯಂತೆ ಮುಂದಿನ ದಿನಗಳಲ್ಲಿ ಸ್ವಂತ ನಿವೇಶನವನ್ನು ಖರೀದಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಸದಸ್ಯರ ಮತ್ತು ಷೇರುದಾರರ ಸಹಕಾರ ಅತ್ಯಗತ್ಯವಾಗಿದ್ದು ಸಂಘದ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಕೈಜೋಡಿಸಬೇಕೆಂದರು.


ಸಂಘದಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆ ಮತ್ತು ಆಭರಣ, ವೈಯಕ್ತಿಕ, ದ್ವಿ ಚಕ್ರವಾಹನ, ಸಾಲ ಸೌಲಭ್ಯ ವಿತರಿಸುವ ಜತೆಗೆ ಹಿರಿಯ ನಾಗರಿಕರಿಗೆ ಶೇ.7ರಷ್ಟು ಬಡ್ಡಿ ಮತ್ತು 10 ವರ್ಷಗಳಲ್ಲಿ ಠೇವಣಿಯಿಟ್ಟರೆ ಹಣ ದ್ವಿಗುಣಗೊಳ್ಳುವ ಸೌಲಭ್ಯವನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸಲು ಆಡಳಿತ ಮಂಡಳಿ ಕ್ರಮ ವಹಿಸಿರುವುದಾಗಿ ವಿವರಿಸಿದರು.


ಸಂಘದ ಉಪಾಧ್ಯಕ್ಷೆ ಬಿ.ಎಸ್.ಶೈಲಾ, ಸದಸ್ಯರಾದ ಎ.ಎಲ್.ರಾಮಚಂದ್ರು, ಡಿ.ಎಂ.ಗುರುಲಿಂಗಯ್ಯ, ಬಿ.ಎಸ್.ರವೀಂದ್ರ, ಟಿ.ಎಲ್.ನಂಜುಂಡಸ್ವಾಮಿ, ಶೈಲಜಾ, ಸತೀಶ್, ಆರ್.ನಾಗೇಂದ್ರ, ಬಸವಾಚಾರಿ, ಮರಿದೇವರು, ಕಾರ್ಯದರ್ಶಿ ಬಿ.ಗೌರಮ್ಮ ಹಾಜರಿದ್ದರು.