ಜಿಲ್ಲೆ

ಕಾಂಗ್ರೆಸ್ ಸೇರಲು ಬಿಜೆಪಿ, ಜೆಡಿಎಸ್ ಶಾಸಕರ ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ, ಡಿಕೆಶಿ ಓಕೆ ಎಂದರೆ ಸಾಕು

ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಉಚ್ಚಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು ಮೊದಲಿನಿಂದಲೂ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದಾರೆ. ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೊರತುಪಡಿಸಿದಂತೆ ಆ ಪಕ್ಷಗಳಲ್ಲಿನ ಅನೇಕರು ಕಾಂಗ್ರೆಸ್ಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹತಾಶ ಭಾವನೆಯಲ್ಲಿ ಬಿಜೆಪಿಯು ಶಾಸಕರನ್ನು ಉಚ್ಚಾಟಿಸಿದೆ. ಆ ಪಕ್ಷದಿಂದ ಅನೇಕರು ಕಾಂಗ್ರೆಸ್ಗೆ ಬಂದು ಬಿಟ್ಟರೆ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

*ಆಂಧ್ರ ಸಿಎಂ ಪ್ಲೀಸ್ ಬೇಡ
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರಾಜ್ಯದಲ್ಲಿ ಏನು ಬೇಕಾದರೂ ಮಾಡಲಿ, ಆದರೆ, ಕರ್ನಾಟಕದ ಎಚ್ಎಎಲ್ ನಮಗೆ ಇರಲಿ, ಇದರ ತಂಟೆಗೆ ಬರುವುದು ಬೇಡ, ದಯವಿಟ್ಟು ಸಂಸ್ಥೆಯನ್ನು ತೆಗೆದುಕೊಂಡು ಹೋಗಬೇಡಿ ಎಂದು ಶಾಸಕರು ತೆಲುಗು ಭಾಷೆಯಲ್ಲಿ ಮನವಿ ಮಾಡಿದರು..