ಜಿಲ್ಲೆ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಯುವ ಘಟಕ ಪದಾಧಿಕಾರಿಗಳ ಆಯ್ಕೆಗೆ ಆನ್‌ಲೈನ್ ಮತದಾನ

ಮಾನ್ವಿ : ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಯುವ ಘಟಕದ ರಾಜ್ಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಿಲ್ಲೆ ಮತ್ತು ತಾಲೂಕು ಅಧ್ಯಕ್ಷರ ಆಯ್ಕೆಗೆ ಮಂಗಳವಾರ ಆನ್‌ಲೈನ್ ಮತದಾನ ನಡೆಯಿತು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗ್ಗೆ 9 ರಿಂದ ಸಂಜೆ ನಾಲ್ಕರವರೆಗೆ ವ್ಯವಸ್ಥೆ ಮಾಡಿದ್ದ ಆನ್‌ಲೈನ್ ಮತದಾನದಲ್ಲಿ ತಾಲೂಕಿನ ಯುವ ಕಾಂಗ್ರೆಸ್ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಹಕ್ಕು ಚಲಾಯಿಸಿದರು. ಪ್ರತಿ ಸದಸ್ಯ ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಿಲ್ಲೆ ಮತ್ತು ತಾಲೂಕು ಅಧ್ಯಕ್ಷರ ಆಯ್ಕೆಗಾಗಿ ಒಟ್ಟು ನಾಲ್ಕು ಮತ ಚಲಾಯಿಸಿದರು. ತಾಲೂಕು ಅಧ್ಯಕ್ಷ ಸ್ಥಾನಕ್ಕೆ ನಿಶಾಂತ ಈರಣ್ಣ, ವಿಜಯ ಸ್ಪಧಿಸಿದ್ದು, ಫಲಿತಾಂಶ ಜ.21ಕ್ಕೆ ತಿಳಿಯಲಿದೆ.


ಪಕ್ಷದ ಮುಖಂಡರಾದ ರಾಜಾ ವಸಂತ ನಾಯಕ, ಅರುಣಚಂದ, ಮಹಾಂತೇಶಸ್ವಾಮಿ ರೌಡುರು, ಸಮದಾನಿ ನಾಯ್ಕ, ಸಾಬೀರ್‌ಪಾಷಾ, ಡಿ.ರಾಮಕೃಷ್ಣ, ಹನುಮೇಶ ಮದ್ಲಾಪುರ, ರೇವಣಸಿದ್ದಯ್ಯಸ್ವಾಮಿ, ಹುಸೇನ್‌ಬಾಷಾ ಕೊಡ್ಲಿ, ಮುಜಾಮಿಲ್‌ಖಾದ್ರಿ, ರಹಿಮತ್ ಅಲಿ, ಅಬ್ಬು ಪಾಟೇಲ್ ಇತರರು ಇದ್ದರು.