ಜಿಲ್ಲೆ

ವಿಶ್ವಕರ್ಮರಿಗೆ ಬೇಕಿದೆ ಮೀಸಲಾತಿ

ಮಾನ್ವಿ: ಹಿಂದಿನ ಕಾಲದಲ್ಲಿ ರಾಜರು ಕಲಾವಿದರಿಗೆ ಆಶ್ರಯ ನೀಡಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಅದೇ ರೀತಿ ಇಂದು ವಿಶ್ವಕರ್ಮ ಸಮುದಾಯದ ಪಂಚ ವೃತ್ತಿಗಳು ಅಳಿವಿನ ಅಂಚಿನಲ್ಲಿನದ್ದು, ಉಳಿವಿಗೆ ಸರ್ಕಾರ ಮೀಸಲಾತಿ ನೀಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಒತ್ತಾಯಿಸಿದರು.

ತಾಲೂಕಿನ ಸಂಗಾಪುರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಸಭೆಯಲ್ಲಿ ಭಾನುವಾರ ಮಾತನಾಡಿ, ವಿಶ್ವಕರ್ಮ ಸಮುದಾಯದಲ್ಲಿ ಬಡಿಗ, ಶಿಲ್ಪಿ, ಕಂಚಗಾರ, ಕಮ್ಮಾರ, ಅಕ್ಕಸಾಲಿಗ ವೃತ್ತಿಗಳಿವೆ. ಮಾನವನ ನಾಗರಿಕತೆ ಹುಟ್ಟಿನೊಂದಿಗೆ ಬಂದಿರುವ ಈ ವೃತ್ತಿಗಳು ಇಂದು ನಶಿಸುತ್ತಿವೆ. ವಿಶ್ವಕರ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದೆ. ಆದ್ದರಿಂದ ವಿಶ್ವಕರ್ಮ ಸಮುದಾಯವನ್ನು ಕೂಡಲೇ ಎಸ್ಟಿಗೆ ಸೇರಿಸಬೇಕೆಂದರು.