ಮಾನ್ವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಮಂಗಳವಾರ ಉದ್ಘಾಟಿಸಿದರು.  
ಜಿಲ್ಲೆ

ಏಕೀಕರಣ ಹೋರಾಟಗಾರರನ್ನು ಮರೆಯದಿರಿ- ಶಾಸಕ ರಾಜಾ ವೆಂಕಟಪ್ಪ ನಾಯಕ ಸಲಹೆ

Raichur

ಮಾನ್ವಿ: ಕನ್ನಡ ನುಡಿ, ಜಲ, ಭಾಷೆಯ ಬಗ್ಗೆ ಅಭಿಮಾನ ಎಲ್ಲರಲ್ಲಿ ಬರಬೇಕು. ಕನ್ನಡ ಭಾಷೆಗೆ ಕೊಡುಗೆ ನೀಡಿದ ಮಹನಿಯರನ್ನ ನೆನೆಯಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಅವರಣದಲ್ಲಿ ಮಂಗಳವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಅಲೂರು ವೆಂಕಟರಾಯರನ್ನ ನಾವು ಎಂದೂ ಮರೆಯುವಂತಿಲ್ಲ. ಗಡಿ ಹಾಗೂ ಭಾಷೆಗೆ ಧಕ್ಕೆಯಾದಾಗ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಎಲ್ಲರೂ ಕನ್ನಡವನ್ನು ಗೌರವಿಸಬೇಕು ಎಂದು ಹೇಳಿದರು.