ಮಾನ್ವಿ ತಾಲೂಕಿನ ಅಮರಾವತಿ ಕ್ರಾಸ್ ಬಳಿ ಸೋಮವಾರ ಮಧ್ಯರಾತ್ರಿ ಟ್ಯಾಂಕರ್ ಮತ್ತು ಟಾಟಾ ಏಸ್ ಡಿಕ್ಕಿಯಾದ ಸ್ಥಳಕ್ಕೆ ಎಸ್ಪಿ ಬಿ.ನಿಖಿಲ್ ಮಂಗಳವಾರ ಭೇಟಿ ನೀಡಿದ್ದರು.  
ಜಿಲ್ಲೆ

ಟ್ಯಾಂಕರ್, ಟಾಟಾ ಏಸ್ ನಡುವೆ ಡಿಕ್ಕಿಯಾಗಿ ಇಬ್ಬರ ಸಾವು

ಮಾನ್ವಿ: ತಾಲೂಕಿನ ಅಮರಾವತಿ ಕ್ರಾಸ್ ಬಳಿ ಸೋಮವಾರ ಮಧ್ಯರಾತ್ರಿ ಟ್ಯಾಂಕರ್ ಮತ್ತು ಟಾಟಾ ಏಸ್ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೂರು ಜನರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಟ್ಯಾಂಕರ್ ಮತ್ತು ಟಾಟಾ ಏಸ್ ಸಿಂಧನೂರಿನಿಂದ ರಾಯಚೂರು ಕಡೆಗೆ ತೆರಳುತ್ತಿದ್ದವು. ಅಮರಾವತಿ ಕ್ರಾಸ್ ಬಳಿ ವೇಗ ನಿಯಂತ್ರಕ ತಡೆಯಿದ್ದ ಕಾರಣ ಟ್ಯಾಂಕರ್ ಚಾಲಕ ಬ್ರೇಕ್ ಹಾಕಿದ್ದು, ಹಿಂದೆ ಬರುತ್ತಿದ್ದ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನೆಲಮಂಗಲದ ಇಸ್ಹಾಕ್‌ಅಲಿ (42) ಹಾಗೂ ಮಹಾರಾಷ್ಟ್ರ ಮೂಲದ ವಿನಯ ಶರ್ಮಾ ಚುನ್ನಿಲಾಲ್ (54) ಮೃತಪಟ್ಟಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಎಸ್ಪಿ ಬಿ.ನಿಖಿಲ್ ಭೇಟಿ ನೀಡಿದ್ದರು.