ಮಾನ್ವಿ: ಸರ್ಕಾರಿ ನೌಕರರ ಸಮಸ್ಯೆಗಳು ಹಾಗೂ ಬೇಡಿಕೆಗಳ ಈಡೇರಿಕೆಗೆ ನೌಕರರಲ್ಲಿರುವ ಸಂಘಟನಾತ್ಮಕ ಶಕ್ತಿಯೇ ಪ್ರಮುಖ ಕಾರಣ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ವಿಭಾಗೀಯ ಮಾಜಿ ಉಪಾಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಘಟಕ ಶನಿವಾರ ಏರ್ಪಡಿಸಿದ್ದ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೌಕರರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೌಕರರ ಸಂಘದ ಸಂಸ್ಥಾಪಕಿ ಮೇರಿ ದೇವಾಸಿ ಭಾವಚಿತ್ರಕ್ಕೆ ಮಾಲಾರ್ಪಣೆ ನೇರವೇರಿಸಿ ಮಾತನಾಡಿದರು.
ತಾಲೂಕ ಸರ್ಕಾರಿ ನೌಕರರ ಸಂಘ ಅತ್ಯಂತ ಕ್ರಿಯಾಶೀಲತೆ ಮತ್ತು ಸಮಾಜಮುಖಿ ಕೆಲಸ ಕಾರ್ಯಗಳು ಹಾಗೂ ನಿರಂತರ ಸಂಘದ ಕಾರ್ಯಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವುದರಿಂದ ಜಿಲ್ಲೆಯಲ್ಲಿಯೇ ಸಂಘಕ್ಕೆ ಹೆಚ್ಚಿನ ಮಾನ್ಯತೆಯಿದೆ ಎಂದರು.
ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಕಾರ್ಯಕ್ರಮ ಉದ್ಘಾಟಿಸಿದರು. ನೌಕರರ ಸಂಘದ ತಾಲೂಕ ಅಧ್ಯಕ್ಷ ಶ್ರೀಶೈಲಗೌಡ ಮಾತನಾಡಿದರು. 35 ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಪಂ ಇಒ ಅಣ್ಣಾರಾವ್, ಟಿಎಚ್‌ಒ ಡಾ.ಚಂದ್ರಶೇಖರಯ್ಯಸ್ವಾಮಿ, ಬಿಇಒ ಚಂದ್ರಶೇಖರ ದೊಡ್ಡಮನಿ, ಅಕ್ಷರ ದಾಸೋಹ ಅಧಿಕಾರಿ ಸುರೇಶನಾಯಕ, ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣನಾಯಕ, ಉಪತಹಸೀಲ್ದಾರ್ ವಿರುಪಣ್ಣ, ಜೆ.ಹನುಮಂತನಾಯಕ, ರಾಜ್ಯ ಪರಿಷತ್ ಸದಸ್ಯ ಪಿ.ಪ್ರಸಾದ, ತಾಲೂಕ ಗೌರವಾಧ್ಯಕ್ಷ ಸುರೇಶ ಕುರ್ಡಿ, ಪ್ರಧಾನ ಕಾರ್ಯದರ್ಶಿ ಹಂಪಣ್ಣ ಚಂಡೂರು, ಫಕೀರಪ್ಪ ಓಲೇಕಾರ್, ಆರೀಫ್ ಮಿಯ್ಯ, ಶಂಕರ ಕುರ್ಡಿ, ಯಂಕಯ್ಯಶೆಟ್ಟಿ ಬ್ಯಾಗವಾಟ್, ಸುರೇಶಕುಮಾರ, ಯಂಕಣ್ಣಯಾದವ್, ಅರುಣಕುಮಾರ, ಅಶೋಕ, ಶಾಹಿದಾ ಬಾನು ಇದ್ದರು.