ಮಾನ್ವಿ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲಿಮರು ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
ಜಿಲ್ಲೆ

ತಿಂಗಳ ಉಪವಾಸ ಅಂತ್ಯ

ಶ್ರೀನಾಥ

ಮಾನ್ವಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಂಜಾನ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಸೋಮವಾರ ಆಚರಣೆ ಮಾಡಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.

ಒಂದು ತಿಂಗಳವರಗೆ ರೋಜಾ (ಉಪವಾಸ) ಇದ್ದು, ಹಬ್ಬದ ದಿನದಂದು ಉಪವಾಸ ಅಂತ್ಯಗೊಳಿಸಿದರು. ಈದ್ಗಾ ಮೈದಾನದಲ್ಲಿ ಧರ್ಮಗುರು ಸೈಯ್ಯದ್ ದಿಶಾನ್ ಖಾದ್ರಿ ಮುಫ್ತಿ ಸಂದೇಶ ನೀಡಿ, ಅನ್ವರ್ ಪಾಷಾ ಉಮರಿ ಕುರಾನ್ ಪಠಿಸಿದರು. ಬಡವರಿಗೆ ಆಹಾರ, ಧಾನ್ಯ, ಹಣದ ರೂಪದ ಕಾಣಿಕೆಯನ್ನು ದಾನ ಮಾಡಲಾಯಿತು. ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮುಸ್ಲಿಂ ಸಮುದಾಯದವರಿಗೆ ಶುಭಾಶಯ ಕೋರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರ್‌ಸಾಬ್, ಮುಖಂಡರಾದ ಬಿ.ಕೆ.ಅಮರೇಶಪ್ಪ, ಶರಣಯ್ಯನಾಯಕ ಗುಡದಿನ್ನಿ, ರಾಜಾ ರಾಮಚಂದ್ರ ನಾಯಕ, ಜಿ.ನಾಗರಾಜ, ವೀರೇಶ, ಶರಣಪ್ಪ ಮೇದಾ, ತಿಪ್ಪಣ್ಣ ಬಾಗಲವಾಡ, ಮಹಾಂತೇಶಸ್ವಾಮಿ ರೌಡೂರು, ಸಬ್ಜಲಿಸಾಬ್, ರವಿಚಂದ್ರ ಇನ್ನಿತರರಿದ್ದರು.