ಜಿಲ್ಲೆ

ಹಿತವಚನ ನುಡಿಯುವುದೇ ಹರಿನಾಮ ಸ್ಮರಣೆ

ಮಾನ್ವಿ: ಪಟ್ಟಣದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಜಗನ್ನಾಥದಾಸರ ಸನ್ನಿಧಾನದಲ್ಲಿ ಗೋಪಾಲದಾಸರ 260ನೇ ಆರಾಧನಾ ಮಹೋತ್ಸವದ ಮಧ್ಯರಾದನೆ ಅಂಗವಾಗಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಹರಿಕಥಾಮೃತಸಾರ ಪಾರಾಯಣ, ಜಗನ್ನಾಥದಾಸರ ಸ್ಥಂಬಕ್ಕೆ ಹಾಗೂ ಗೋಪಾಲದಾಸರಿಗೆ ಫಲ ಪಂಚಾಮೃತ, ನೈವೇದ್ಯ, ಹಸ್ತೋದಕ, ಮಹಾ ಮಂಗಳಾರತಿ ನೆರವೇರಿತು. ಹರನಹಳ್ಳಿಯ ಪಂ.ಭೀಮಸೇನ ದೇಸಾಯಿ ಮಾತನಾಡಿ, ಗೋಪಾಲದಾಸರು ಅಪರೋಕ್ಷಜ್ಞಾನಿಗಳಾಗಿದ್ದರು. ಅವರು ಎಲ್ಲರಲ್ಲಿರುವ ಅತ್ಮ, ಅಂತರಾತ್ಮ, ಪರಮಾತ್ಮನ ಪರಿಚಯವನ್ನು ಅತ್ಯಂತ ಸರಳವಾಗಿ ಕಿರ್ತನೆಗಳ ಮೂಲಕ ಹಾಗೂ ಕೃತಿಗಳ ಮೂಲಕ ತಿಳಿಸಿಕೊಟ್ಟಿದ್ದಾರೆ, ಹಿತವಚನವನ್ನು ನುಡಿಯುವುದೆ ಹರಿನಾಮ ಸ್ಮರಣೆಯಾಗಿದ್ದು, ನಾವು ನಿತ್ಯ ಶುಭ ನುಡಿಗಳನ್ನು ನುಡಿಯುವುದರಿಂದ ಹರಿನಾಮ ಸ್ಮರಣೆ ಮಾಡಿದಂತಾಗುತ್ತದೆ ಎಂದರು ತಿಳಿಸಿದರು.

ಚೀಕಲಪರ್ವಿಯ ವಿಜಯದಾಸರನ್ನು ಗುರುಗಳೆಂದು ಸ್ವೀಕರಿಸಿ ಅವರಿಂದ ಗೋಪಾಲ ವಿಠಲ ಎಂಬ ಅಂಕಿತವನ್ನು ಪಡೆದು ಹರಿದಾಸ ದೀಕ್ಷೆಯನ್ನು ಕೈಗೊಂಡು ಗುರು ಕರುಣೆಯೆಂಬ ಭದ್ರವಾದ ಕವಚವನ್ನು ಗೋಪಾಲದಾಸರು ಪಡೆದರು. ಗುರುಗಳ ಅಣತಿಯಂತೆ ಮಾನ್ವಿಯ ಜಗನ್ನಾಥದಾಸರಿಗೆ ತಮ್ಮ 80 ವರ್ಷಗಳ ಅಯುಷ್ಯದಲ್ಲಿ ಧನ್ವಂತರಿ ಸ್ತೋತ್ತ್ರವನ್ನು ಪಠಿಸಿ 40 ವಷರ್ಗಳ ಅಯುಷ್ಯ ನೀಡಿದ್ದರಿಂದಲೇ ಜಗನ್ನಾಥದಾಸರು ನ್ಯಾಯಸುಧಾಕ್ಕೆ ಪರ್ಯಾಯ ಗ್ರಂಥವಾದ ಹರಿಕಥಾಮೃತಸಾರ ರಚಿಸಲು ಕಾರಣರಾದರು ಎಂದರು.