ಜಿಲ್ಲೆ

ಪಕ್ಷಿಗಳ ರಕ್ಷಣೆ ನಮ್ಮೆಲ್ಲರ ಹೊಣೆ

ಅಶೋಕ್ ಕುಮಾರ್ ಎನ್

ಮಾನ್ವಿ, ಪಕ್ಷಿಗಳ, ರಕ್ಷಣೆ, ನಮ್ಮೆಲ್ಲರ ಹೊಣೆ, manvi, Protection of birds, human responsibility,

ಮಾನ್ವಿ: ಪಕ್ಷಿಗಳ ಸಂಕುಲ ಕಡಿಮೆಯಾಗುತ್ತಿದ್ದು, ಪ್ರತಿಯೊಬ್ಬರೂ ಆಹಾರ, ನೀರು ಕೊಟ್ಟಾಗ ಪಕ್ಷಿ ಸಂಕುಲದ ಉಳಿವು ಸಾಧ್ಯ ಎಂದು ಪಕ್ಷಿ ಪ್ರೇಮಿ ಸಲ್ಲಾವುದ್ದೀನ್ ತಿಳಿಸಿದರು.
ಮುಷ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತ ಸಂವಾದದಲ್ಲಿ ಮಾತನಾಡಿದರು. ಮೊಬೈಲ್ ಟವರ್‌ಗಳಿಂದ ಪಕ್ಷಿ ಸಂಕುಲ ಕ್ಷೀಣಿಸುತ್ತಿದೆ. ಈ ಹಿಂದೆ ಬೆಳಗಾದರೆ ಗುಬ್ಬಿಗಳ ಕೂಗು ಕೇಳುತ್ತಿತ್ತು. ಈಗ ಅವು ಅಪರೂಪವಾಗಿವೆ ಎಂದರು.
ಬೆಳೆಗಳ ರಕ್ಷಣೆಯಲ್ಲಿ ಪಕ್ಷಿಗಳ ಪಾತ್ರ ಬಹಳ ಇದೆ. ಬೆಳೆಗಳಲ್ಲಿ ಕಂಡುಬರುವ ಕೀಟಗಳನ್ನು ಆಹಾರವಾಗಿ ತೆಗೆದುಕೊಂಡು ಬೆಳೆ ರಕ್ಷಣೆ ಮಾಡುತ್ತವೆ. ತಾಲೂಕಿನ ತುಂಗಭದ್ರಾ ನದಿ ತೀರಕ್ಕೆ ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ಪಕ್ಷಿಗಳು ಬಂದು ಆಹಾರ ಪಡೆಯುತ್ತವೆ ಹಾಗೂ ಸಂತಾನೋತ್ಪತ್ತಿ ನಡೆಸುತ್ತವೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಪ್ರಕಾಶ ಬಾಬು, ಶಿಕ್ಷಕರಾದ ಮುತ್ತಣ್ಣ , ಮುರುಳೀಧರ, ಪ್ರೀತಿ, ಪಾರ್ವತಿ, ಅನ್ನಪೂರ್ಣ, ಜರಿನಾಬೇಗಂ, ಶ್ರೀನಿವಾಸ, ಛಾಯಗ್ರಾಹಕ ಜಗನ್ನಾಥ ಚೌಧರಿ ಇತರರಿದ್ದರು.