ಸಿಪಿಐ(ಎಂಎಲ್) ರೆಡ್‌ಸ್ಟಾರ್ ತಾಲೂಕು ಘಟಕ ಪ್ರತಿಭಟನೆ
ಮಾನ್ವಿ: ತಾಲೂಕಿನ ಪೋತ್ನಾಳ್ ಹಾಗೂ ಉಟಕನೂರು ಗಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಡಿ ಕಾರ್ಯ ನಿರ್ವಹಿಸಿದ ಟ್ರ್ಯಾಕ್ಟರ್ ಮಾಲೀಕರಿಗೆ ಬಾಡಿಗೆ ಹಣ ಪಾವತಿಸಲು ಒತ್ತಾಯಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ತಾಲೂಕು ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು.
ಪಟ್ಟಣದ ಧ್ಯಾನ ಮಂದರದಿಂದ ತಾಪಂ ಕಚೇರಿ ವರೆಗೆ ರ‌್ಯಾಲಿ ನಡೆಸಿ, ತಾಪಂ ಇಒ ಶರಣಬಸವಗೆ ಮನವಿ ಸಲ್ಲ್ಲಿಸಿತು. ಬಾಡಿಗೆ ನೀಡಲು ವಿಳಂಬ ಮಾಡುತ್ತಿರುವ ಗ್ರಾಪಂ ಅಧಿಕಾರಿಗಳು, ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಬೇಕು. ಪೋತ್ನಾಳ್ ಗ್ರಾಪಂ ಪಿಡಿಒ ರನ್ನು ಅಮಾನತು ಮಾಡಬೇಕು. ಬೋಗಸ್ ಜಾಬ್‌ಕಾರ್ಡ್ ಸೃಷ್ಟಿಸಿದ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಾಪಂ ಇಒ ಶರಣಬಸವ, 10 ದಿನದೊಳಗೆ ಟ್ರ್ಯಾಕ್ಟರ್ ಮಾಲೀಕರ ಬಾಡಿಗೆ ಹಣ ನೀಡುವುದಾಗಿ ಭರವಸೆ ನೀಡದರು. ನಂತರ ಪ್ರತಿಭಟನೆ ಹಿಂ ಪಡೆಯಲಾಯಿತು. ಪ್ರಮುಖರಾದ ಪ್ರಕಾಶ ದೋತರಬಂಡಿ, ನಿರಂಜನಪ್ಪ ಸಾಹುಕಾರ, ಸಂಗಪ್ಪ ಸಾಹುಕಾರ, ಬಸವರಾಜ ಬೆಳವಾಟ್, ಶಂಕರಗೌಡ ಬೆಳವಾಟ, ಹನುಮೇಶ, ನಾಗನಗೌಡ, ಕನಕಪ್ಪ ಇತರರು ಇದ್ದರು.