ಜಿಲ್ಲೆ

ಬಸವ ತತ್ವಕ್ಕೆ ವಿಜಯ ಮಹಾಂತ ಶ್ರೀ ಆದ್ಯತೆ


ಮೈಸೂರಿನ ನಿರಂಜನ ಸ್ವಾಮೀಜಿ ಹೇಳಿಕೆ | ಶಿವಯೋಗಿಗಳ ಪುರಾಣ ಕಾರ್ಯಕ್ರಮ

ಮಾನ್ವಿ: ಜೀವಿತಾವಧಿಯಲ್ಲಿ ಬಸವತತ್ವಗಳನ್ನು ಮನೆ ಮನಗಳಿಗೆ ಮುಟ್ಟಿಸಿದ ಕೀರ್ತಿ ಲಿಂಗೈಕ್ಯ ಚಿತ್ತರಗಿ ಇಳಕಲ್ ವಿಜಯ ಮಹಾಂತ ಶಿವಯೋಗಿಗೆ ಸಲ್ಲುತ್ತದೆ ಎಂದು ಮೈಸೂರಿನ ನಿರಂಜನ ಶ್ರೀಗಳು ಹೇಳಿದರು.

ತಾಲೂಕಿನ ಚೀಕಲಪರ್ವಿ ಗ್ರಾಮದ ರುದ್ರಮುನಿಶ್ವರ ಶ್ರೀಮಠದಲ್ಲಿ ಲಿಂ.ರುದ್ರಮುನಿ ಶಿವಯೋಗಿಗಳ 94ನೇ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಜಯ ಮಹಾಂತ ಶಿವಯೋಗಿಗಳಿಗೆ ಕೆಲವರು ಎಷ್ಟೇ ಕಷ್ಟಗಳನ್ನು ನೀಡಿದರೂ ಅದನ್ನು ಬಸವ ಪ್ರಸಾದವೆಂದು ಸ್ವೀಕರಿಸಿದರು. ಬಸವಣ್ಣವರ ವಚನಗಳನ್ನು ಬೆನ್ನಿಗೆ ಕಟ್ಟಿಕೊಂಡು ತತ್ವ ಪ್ರಚಾರ ಮಾಡಿದರೆಂದು ತಿಳಿಸಿದರು.

ಶ್ರೀಮಠದ ಪೀಠಾಧ್ಯಕ್ಷ ಸದಾಶಿವ ಶ್ರೀಗಳು ಮಾತನಾಡಿ, ಈ ಭಾಗದಲ್ಲಿ ಲಿಂ.ರುದ್ರಮುನಿ ತಾತನವರು ಭಕ್ತರ ಇಷ್ಟಾರ್ಥಗಳನ್ನು ಈಡೆರಿಸಿದ್ದಾರೆ. ಪ್ರತಿವರ್ಷ ತಾತನವರ ಜಾತ್ರೆ ಅಂಗವಾಗಿ ನಡೆಯುವ ಪುರಾಣ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು.