ಮಾನ್ವಿಯಲ್ಲಿ ತಹಸೀಲ್ದಾರ್ ರಾಜು ಪಿರಂಗಿಗೆ ಜಯ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ರಾಜಾ ವಿಜಯಕುಮಾರ, ಪದಾಧಿಕಾರಿಗಳಾದ ದೊಡ್ಡಪ್ಪ ಹೊಗಾರ, ಶರಣಯ್ಯಸ್ವಾಮಿ, ಶೇಕ್ ಮುಸ್ತಫಾ, ಜಲಾಲ್ ಇತರರಿದ್ದರು. 
ಜಿಲ್ಲೆ

ಜಾತ್ರೆಗೆ ಬರುವ ಭಕ್ತರಿಗೆ ಸೌಲಭ್ಯ ಕಲ್ಪಿಸಿ

ಮಾನ್ವಿ: ತಾಲೂಕಿನ ನೀರಮಾನ್ವಿ ಯಲ್ಲಮ್ಮದೇವಿ ಜಾತ್ರೆಯಲ್ಲಿ ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಸೋಮವಾರ ತಹಸೀಲ್ದಾರ್ ರಾಜು ಪಿರಂಗಿಗೆ ಮನವಿ ಸಲ್ಲಿಸಿದರು.

ವೇದಿಕೆ ತಾಲೂಕು ಅಧ್ಯಕ್ಷ ರಾಜಾ ವಿಜಯಕುಮಾರ ಮಾತನಾಡಿ, ಪ್ರತಿವರ್ಷ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅಗತ್ಯ ಸೌಲಭ್ಯ ಕಲ್ಪಿಸದ ಕಾರಣ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಸ್ನಾನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಸ್ವಚ್ಛತೆ ಕಾಪಾಡಬೇಕು. ನಾಲ್ಕು ಕಡೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಸೇರಿ ಇತರ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ದೊಡ್ಡಪ್ಪ ಹೊಗಾರ, ಶರಣಯ್ಯಸ್ವಾಮಿ, ಶೇಕ್ ಮುಸ್ತಫಾ, ಜಲಾಲ್ ಶಾಸ್ತ್ರಿಕ್ಯಾಂಪ್, ಗುರುರಾಜ ಕುಲಕರ್ಣಿ, ಈರೇಶ ಮಳ್ಳಿ, ಮಲ್ಲನಗೌಡ ಬೈಲ್ ಮರ್ಚೇಡ್, ಬಸವರಾಜ ಮೈಲಾರಿ, ಯಂಕೋಬ ಯಾದವ, ಬಸವಪ್ರಭು ಜೇಗರಕಲ್ ಇತರರಿದ್ದರು.