ನೀರಮಾನ್ವಿ ಗ್ರಾಪಂಗೆ ಬುಧವಾರ ತಾಪಂ ಇಒ ಖಾಲೀದ್ ಅಹಮ್ಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಡಿಒ ಮಹಮ್ಮದ್ ಜುಬೇರ ಇದ್ದರು. 
ಜಿಲ್ಲೆ

ಕರವಸೂಲಾತಿಯಲ್ಲಿ ನಿಗದಿತ ಗುರಿ ಸಾಧಿಸಿ

ಪ್ರವೀಣ ಉದುಸಾ ದಲಬಂಜನ್

ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಪಂಗೆ ಬುಧವಾರ ತಾಪಂ ಇಒ ಖಾಲಿದ್ ಅಹಮ್ಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಾರದಿಂದ ನಿಗದಿಪಡಿಸಿರುವ ಕರವಸೂಲಾತಿ ಗುರಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಅದರ ವಿವರಗಳನ್ನು ಪಂಚತಂತ್ರ 2.0 ದಲ್ಲಿ ಪ್ರತಿದಿನ ದಾಖಲಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ 2025-26 ನೇ ಸಾಲಿನ ಕಾಮಗಾರಿ ಮುಗಿದ ತಕ್ಷಣವೇ ಗುರಿಗೆ ಅನುಗುಣವಾಗಿ ಮಾನವ ದಿನಗಳ ಸೃಜನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇಒ ಖಾಲಿದ್ ಅಹಮ್ಮದ್ ಸೂಚಿಸಿದರು. ಗ್ರಾಮದ ಮನೆಗಳಿಗೆ ಪೂರೈಕೆ ಮಾಡುವ ನೀರಿನ ಸಂಗ್ರಹ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಗ್ರಾಮದ ಪ್ರತಿ ಮನೆಯಿಂದ ವಾಹನಗಳ ಮೂಲಕ ತ್ಯಾಜ್ಯ ಸಂಗ್ರಹಿಸಿ ಕಸವಿಲೇವಾರಿ ಮಾಡಲುಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಿಒ ಮಹಮ್ಮದ್ ಜುಬೇರಗೆ ತಿಳಿಸಿದರು. ಬಸವರಾಜ ಇದ್ದರು.