ಜಿಲ್ಲೆ

ಅಭಿವೃದ್ಧಿ ನಿಗಮ ಸ್ಥಾಪನೆಗೆ ನದಾಫ್ ಪಿಂಜಾರ ಸಮುದಾಯದ ಆಗ್ರಹ

ಮಾನ್ವಿ: ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದ ರಾಜ್ಯದಲ್ಲಿ ನದಾಫ್ ಪಿಂಜಾರ ಸಮುದಾಯದವರ ಸಹಾಯಕ್ಕಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ತಾಲೂಕು ಘಟಕ ಒತ್ತಾಯಿಸಿದೆ.

ತಹಸೀಲ್ ಕಚೇರಿಯ ಕಂದಾಯ ಅಧಿಕಾರಿ ಮಹೇಶಗೆ ಮಂಗಳವಾರ ಮನವಿ ಸಲ್ಲಿಸಿತು. ಕೇಂದ್ರ ಸರ್ಕಾರ ಪಿಂಜಾರ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಿದೆ. ಆದರೆ, ಇಂದಿಗೂ ಸಮುದಾಯದವರು ಗಾದಿ ತಯಾರಿಕೆ, ಗುಡಾರ ನೇಯ್ಗೆ, ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ, ಸರ್ವಾಂಗೀಣ ಅಭಿವೃದ್ಧಿಗೆ ನಿಗಮ ಅಗತ್ಯವಾಗಿದೆ ಎಂದು ಮನವಿಯಲ್ಲಿ ಕೋರಲಾಗಿದೆ.

ಸಮುದಾಯದ ಪ್ರಮುಖರಾದ ನಸೀರ್ ಅಲಿ, ಖಾನ್‌ಸಾಬ್ ಪೋತ್ನಾಳ್, ಹುಸೇನ್‌ಸಾಬ್, ಮಹ್ಮದ್ ರಹೆಮತುಲ್ಲಾ, ಅಬ್ಬು ಪಟೇಲ್, ಸಬ್ಜಲಿಸಾಬ್, ರಜ್ಜಬಲಿಸಾಬ್, ಸತ್ತಾರ್‌ಸಾಬ್, ಕಮಲಿಸಾಬ್, ರಫಿ, ಇಮಾಮ್‌ಸಾಬ್, ಖಾಸಿಂ ಮೇಸ್ತ್ರೀ, ಶೇಕ್ಷಾವಲಿ, ಎಂ.ಡಿ.ಬಾಬಾ ಇದ್ದರು.