ಮಾನ್ವಿ: ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ರಥಯಾತ್ರೆಗೆ ಪಟ್ಟಣದಲ್ಲಿ ಕುಂಭ, ಕಳಸದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್ ಕನ್ನಾಂಡಬೆಯ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ ಪಾಟೀಲ್ ವಕೀಲ ಮತ್ತು ಜಿಲ್ಲಾ ಕಸಾಪ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು ಮಾತನಾಡಿ, ಮಂಡ್ಯದಲ್ಲಿ ಡಿ.20,21,22 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮಸ್ತ ಕನ್ನಡಿಗರನ್ನು ಆಹ್ವಾನಿಸುವುದಕ್ಕಾಗಿ ಕನ್ನಡ ರಥಯಾತ್ರೆ ಸಂಚರಿಸುತ್ತಿದೆ. ಪ್ರತಿಯೊಬ್ಬರು ಕನ್ನಡ ಜಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥ ಸಂಚರಿಸಿ ನಂತರ ಸಿರವಾರ ತಾಲೂಕಿಗೆ ಬೀಳ್ಕೊಡಲಾಯಿತು.
ಪುರಸಭೆ ಅಧ್ಯಕ್ಷೆ ಲಕ್ಷ್ಮೀ ವೀರೇಶ, ಸದಸ್ಯೆ ಲಕ್ಷ್ಮೀದೇವಿ ನಾಯಕ, ಪ್ರಮುಖರಾದ ಕೆ.ಇ.ನರಸಿಂಹ, ರಮೇಶಬಾಬು ಯಾಳಗಿ, ಬಸವರಾಜ ಜಂಗಮರಹಳ್ಳಿ, ಬ್ರಿಷ್ಟಪ್ಪ, ನಾಗರಾಜ ಕೊಳ್ಳಿ, ಲಕ್ಷ್ಮಣರಾಯ್ ಕಪಗಲ್, ಗುರುರಾಜ ಕುಲ್ಕರ್ಣಿ, ಕೃಷ್ಣಪ್ಪ, ಶ್ರೀನಿವಾಸ ವಕೀಲ, ಹರಿಹರ ಪಾಟೀಲ್, ಮಹಾಂತೇಶ ಗವಿಗಟ್ಟು, ರಾಮು ಹೊಳೆಯಪ್ಪನವರು, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂಗಮೇಶ ಮುಧೋಳ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ತಾಲೂಕು ವೈದ್ಯಾಧಿಕಾರಿ ಶರಣಬಸವ ಪಾಟೀಲ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರಿದ್ದರು.