ಮಾನ್ವಿ: ಗವಿಗಟ್ಟು ಗ್ರಾಮದ ಅಮರೇಶ (62) ಸಾಲ ಬಾಧೆಯಿಂದ ಕ್ರಿಮಿನಾಷಕ ಸೇವಿಸಿ ಶುಕ್ರವಾರ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 3 ಲಕ್ಷ ರೂ. ಮತ್ತು ಖಾಸಗಿ ಸಾಲ ಇದೆ. ಬೆಳೆಗಳು ಸಂಪೂರ್ಣ ನಾಶವಾದ ಕಾರಣ ಸಾಲದ ಭಯದಿಂದ ಕ್ರಿಮಿನಾಶಕ ಸೇವಿಸಿದ್ದಾರೆ. ಅಸ್ವಸ್ಥ ಅಮರೇಶರನ್ನು ರಾಯಚೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.