ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಮಂಗಳವಾರ ಮೂರು ವೀರಗಲ್ಲುಗಳನ್ನು ಸಂಶೋಧಕ ಹಾಗೂ ಇತಿಹಾಸ ಉಪನ್ಯಾಸಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಪತ್ತೆ ಹಚ್ಚಿದರು. ಈ ವೇಳೆ ದೇವರಾಜ, ನಂದೀಶ, ಶ್ರೀದೇವಿ ನಾಯಕ, ಜ್ಯೋತಿ, ಶ್ರೀದೇವಿ ಇದ್ದರು.  
ಜಿಲ್ಲೆ

ಕರೇಗುಡ್ಡದಲ್ಲಿ 17ನೇ ಶತಮಾನದ ಶಾಸನ ಪತ್ತೆ

ಮಾನ್ವಿ: ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ಎರಡು ಶಾಸನ, ಎರಡು ವೀರ ಮಹಾಸತಿ ಶಿಲ್ಪಗಳು, ಮೂರು ವೀರಗಲ್ಲುಗಳನ್ನು ಸಂಶೋಧಕ ಹಾಗೂ ಇತಿಹಾಸ ಉಪನ್ಯಾಸಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಪತ್ತೆ ಹಚ್ಚಿದ್ದಾರೆ.

ಗ್ರಾಮದ ರಾಜಾ ಪಾಂಡುರಂಗ ನಾಯಕ ಇವರ ಹೊಲದಲ್ಲಿ 17-18ನೇ ಶತಮಾನದ ವೀರಗಲ್ಲುಗಳು ಪತ್ತೆಯಾಗಿದ್ದು, ಇವು ಕಣಶಿಲೆಯಲ್ಲಿ ರಚಿತಗೊಂಡಿವೆ. ಇದರಲ್ಲಿ ವೀರನೊಂದಿಗೆ ನಾಲ್ಕು ಹೋರಿ(ಎತ್ತು)ಗಳು, ಒಂದು ಹಸು (ಆಕಳು), ಒಬ್ಬ ವ್ಯಕ್ತಿ ಮರದ ಟೊಂಗೆಯನ್ನು ಹಿಡಿದಿದ್ದರೆ ಇನ್ನೊಬ್ಬ ವ್ಯಕ್ತಿ ಬಾವುಟ ಹಿಡಿದ್ದಾರೆ. ಈ ಶಿಲ್ಪಗಳೊಂದಿಗೆ ಆರು ಸಾಲಿನ ಶಾಸನದಲ್ಲಿ ಶ್ರೀಮತಿ ಮಿನಿಗಿ ಮೀಸೆಯರ ಗಂಡ ಎಂದು ಪ್ರಾಸ್ತಾಪಿವಾಗಿದೆ.

ಅಂದಿನ ದಿನಮಾನಗಳಲ್ಲಿ ಸೋತು (ಶರಣಾದ)ವರು ಆ ವೀರನ ಶೂರತ್ವವನ್ನು ಒಪ್ಪಿಕೊಂಡವರ ಗಂಡ ಎಂದಾಗುತ್ತದೆ. ಅಂದರೆ ಶಾಸನದಲ್ಲಿದ್ದ ವೀರನು ಕರೆಗುಡ್ಡ ಸುತ್ತಮುತ್ತಲಿನ ಪ್ರದೇಶಕ್ಕೆ ಒಡೆಯನಾಗಿ ಆಳ್ವಿಕೆ ಮಾಡುತ್ತಿದ್ದನು. ಗ್ರಾಮದ ಹಸುಗಳಿಗೆ ತೊಂದರೆ ಕೊಡುತ್ತಿದ್ದ ಹುಲಿಯನ್ನು ಹಿಮ್ಮೆಟಿಸಿದನು. ಹಾಗೆಯೇ ಗ್ರಾಮದ ಕೆರೆಯನ್ನು ಕಟ್ಟಿಸುವುದಕ್ಕೆ ಹೊನ್ನನ್ನು ದಾನವಾಗಿಕೊಟ್ಟನೆಂದು ಶಾಸನವು ಉಲ್ಲೇಖಿಸುತ್ತದೆ ಎಂದು ತಿಳಿಸಿದ್ದಾರೆ.

ಕ್ಷೇತ್ರ ಕಾರ್ಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಕೆ. ಖಾದರಬಾಷಾ, ಸ್ಥಳೀಯರಾದ ರಂಗನಾಥನಾಯಕ ಕಾವಲಿ, ಚನ್ನಬಸವ ನಾಯಕ, ವೆಂಕಟೇಶನಾಯಕ ಕಾವಲಿ, ದೇವರಾಜ, ನಂದೀಶ, ಶ್ರೀದೇವಿ ನಾಯಕ, ಜ್ಯೋತಿ, ಮಹಾಂತೇಶ, ಮಹಿಬೂಬ್, ಶ್ರೀದೇವಿ, ಅಬ್ಬಾಸಲಿ ಇತರರಿದ್ದರು.