ಮಾನ್ವಿ: ತಾಲೂಕಿನ ಪೋತ್ನಾಳ ಸಮೀಪದ ರಾಜ್ಯ ಹೆದ್ದಾರಿ-14ರಲ್ಲಿ ಬರುವ ಜೀನೂರು ಗ್ರಾಮದ ಮತ್ತು ಹಳ್ಳದ ಸೇತುವೆಗಳನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು ಭಾನುವಾರ ಪರಿಶೀಲಿಸಿದರು.
ಹಳ್ಳದ ಸೇತುವೆ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಜೀನೂರು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿಕೊಂಡರು. ಕೂಡಲೇ ಜೀನೂರು ಹಳ್ಳಕ್ಕೆ ತಾತ್ಕಾಲಿಕ ಸೇತುವೆ ನಿರ್ಮಿಸಬೇಕು. ನಂತರ ಸ್ಥಳ ಪರಿಶೀಲನೆ ನಡೆಸಿ, ಗುಣಮಟ್ಟದ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಎಇಇ ಶಾಮೀಲಪ್ಪಗೆ ಸಚಿವರು ಸೂಚಿಸಿದರು. ಶಾಸಕ ಹಂಪಯ್ಯನಾಯಕ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಕಂದಾಯ ನಿರೀಕ್ಷಕ ಸತೀಶ, ಮುಖಂಡರಾದ ಬಿ.ಕೆ.ಅಂಬರೀಶಪ್ಪ, ಶರಣಯ್ಯನಾಯಕ ಗುಡದಿನ್ನಿ, ಖಾಲೀದ್ ಗುರು ಇತರರಿದ್ದರು.