ಮಾನ್ವಿ ತಾಲೂಕಿನ ಕುರ್ಡಿಯಲ್ಲಿ ಕರೊನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ ಶಾಸಕ ಬಸನಗೌಡ ದದ್ದಲ್ ಪರಿಹಾರ ಚೆಕ್ ವಿತರಿಸಿದರು.  
ಜಿಲ್ಲೆ

ಒಳ್ಳೆಯ ಕಾರ್ಯಕ್ಕೆ ಪರಿಹಾರ ಹಣ ಬಳಸಿ

Raichur

ಮಾನ್ವಿ: ಕರೊನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ಸರ್ಕಾರದಿಂದ ಬಂದ ಪರಿಹಾರ ಚೆಕ್ ಅನ್ನು ರಾಯಚೂರು ಗ್ರಾಮಿಣ ಕ್ಷೇತ್ರದ ಶಾಸಕರ ಬಸನಗೌಡ ದದ್ದಲ್ ಸೋಮವಾರ ತಾಲೂಕಿನ ಕುರ್ಡಿ ಗ್ರಾಮದಲ್ಲಿ ವಿತರಿಸಿದರು. ಬಿಪಿಎಲ್ ಕಾರ್ಡ್ ಹೊಂದಿದ ಆರು ಮೃತರ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ ಒಂದು ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರೆ ಕೇಂದ್ರವು 50 ಸಾವಿರ ರೂ. ಖಾತೆಗೇ ಜಮಾ ಮಾಡಿದೆ. ಪರಿಹಾರವನ್ನು ಒಳ್ಳೆಯದಕ್ಕೆ ಬಳಸಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು. ತಹಸೀಲ್ದಾರ್ ಪರಶುರಾಮ್, ಗ್ರೇಡ್ 2 ತಹಸೀಲ್ದಾರ್ ಅಬ್ದುಲ್ ವಾಹಿದ್, ಉಪ ತಹಸೀಲ್ದಾರ್ ಅಬ್ದುಲ್ ರೌಫ್, ಕಂದಾಯ ನಿರೀಕ್ಷಕ ಮಹೇಶ್ ಪಾಟೀಲ್, ಗ್ರಾಮಲೆಕ್ಕಾಧಿಕಾರಿ ಇರ್ಫಾನ್ ಅಲಿ ಇನ್ನಿತರರು ಇದ್ದರು.