ಮಾನ್ವಿ: ಪಟ್ಟಣದ 11 ಮತ್ತು 12ನೇ ವಾರ್ಡ್‌ನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಕೂಡಲೇ ಪರಿವರ್ತಕ ಕೂಡಿಸುವಂತೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಘಟಕ ಬುಧವಾರ ಜೆಸ್ಕಾಂ ಎಇಇ ವೈದ್ಯನಾಥಗೆ ಮನವಿ ಸಲ್ಲಿಸಿತು.
ತಾಲೂಕು ಅಧ್ಯಕ್ಷ ಶೇಕ್ ಬಾಬಾ ಹುಸೇನ್ ಮಾತನಾಡಿ, ವಿದ್ಯುತ್ ಪೂರೈಕೆಯಲ್ಲಿ ಏರುಪೇರಾಗುತ್ತಿರುವುದರಿಂದ ಗೃಹಬಳಕೆ ಉಪಕರಣಗಳು ಹಾಳಾಗುತ್ತಿವೆ.
ಮಳೆಗಾಲದಲ್ಲಿ ಅವಘಡಗಳು ಸಂಭವಿಸುವ ಮುನ್ನ ಜೆಸ್ಕಾಂ ಹಳೆಯ ಟಿಸಿ ಬದಲಿಸಿ 11 ಕೆವಿ ಕೇಬಲ್ ಇನ್ಸುಲೇಷನ್ ವೈರ್ ಹಾಕಬೇಕು. ಈ ಕುರಿತು ಜೆಸ್ಕಾಂಗೆ ಅನೇಕ ಸಲ ದೂರು ನೀಡಿದರೂ ಸ್ಪಂದಿಸುತ್ತಿಲ್ಲ.
ಈ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯ ಸಾದಿಕ್ ಖುರೇಷಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಕಾರ್ಯದರ್ಶಿ ನಾಸಿರ್ ಅಲಿ, ಪ್ರಮುಖರಾದ ಮೋದಿನ್ ನಾಯ್ಕ, ಅಹ್ಮದ್ ಹುಸೇನ್, ಮೊಹಮ್ಮದ್ ಹುಸೇನ್, ಜಾವೀದ್ ನಾಯ್ಕ, ಇಲಿಯಾಸ್, ಆಸೀಫ್ ಹುಸೇನ್, ಉಮರ್ ಖುರೇಷಿ, ಕರೀಂ ಪಟೇಲ್, ಲತೀಫ್ ನಾಯ್ಕ, ಖಾಜಾಬೇಗ್, ಲತೀಫ್, ಸುಹೈಲ್ ಖುರೇಷಿ ಇತರರಿದ್ದರು.