ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಚರಣ್‌ರಾಜ್ ಅಮರಾವತಿಯನ್ನು ಮಾನ್ವಿಯಲ್ಲಿ ಮಾದಿಗ ಮಹಾಸಭಾದಿಂದ ಸನ್ಮಾನಿಸಲಾಯಿತು.  
ಜಿಲ್ಲೆ

ಶಿಕ್ಷಣದಿಂದ ದಲಿತರ ಅಭಿವೃದ್ಧಿ ಸಾಧ್ಯ

Raichur

ಮಾನ್ವಿ: ಶಿಕ್ಷಣದಿಂದ ದಲಿತರ, ಶೋಷಿತರ ಹಾಗೂ ತಳ ಸಮುದಾಯದ ಜನರ ಅಭಿವೃದ್ಧಿ ಸಾಧ್ಯ ಎಂದು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ಹೇಳಿದರು.

ಪಟ್ಟಣದಲ್ಲಿ ಮಾದಿಗ ಮಹಾಸಭಾ ತಾಲೂಕಾ ಯುವ ಘಟಕ ಹಾಗೂ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಚರಣ್‌ರಾಜ್ ಅಮರಾವತಿ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಚರಣ್‌ರಾಜ್ ಸಾಧನೆ ನಮ್ಮ ಸಮುದಾಯದ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಕಷ್ಟಪಟ್ಟು ಓದಿದರೆ ಖಂಡಿತ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ ಎಂದರು.

ಮಹಾಸಭಾ ಮಾನ್ವಿ ತಾಲೂಕು ಅಧ್ಯಕ್ಷ ಯೇಸುರಾಜ, ಸಿರವಾರ ತಾಲೂಕು ಅಧ್ಯಕ್ಷ ಸುರೇಶ ಜಾಲಾಪುರ, ಪ್ರಮುಖರಾದ ಪ್ರೀತಮ್ ಕೊಡ್ಲಿ, ಪಿ.ಅನಿಲ್‌ಕುಮಾರ್, ವಸಂತ ಕೊಡ್ಲಿ, ಚಿನ್ನಪ್ಪ ಪಟ್ಟದಕಲ್, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕುರ್ಡಿ, ಮಾದಿಗ ನೌಕರರ ಸಂಘದ ತಾಲೂಕು ಅಧ್ಯಕ್ಷ ಮೂಕಪ್ಪ ಕಟ್ಟಿಮನಿ, ಪತ್ರಕರ್ತರಾದ ಪಿ.ಪರಮೇಶ, ತಾಯಪ್ಪ ಬಿ.ಹೊಸೂರು, ಯಲ್ಲಪ್ಪ ಅಸ್ಕಿಹಾಳ ಇತರರು ಇದ್ದರು.